ಟೆಲಿಗ್ರಾಂನಲ್ಲಿ ಆಕ್ಟಿವ್ ಇರೋ ಯುವಕರೇ ಇವರ ಟಾರ್ಗೆಟ್

ಮಂಗಳವಾರ, 1 ಆಗಸ್ಟ್ 2023 (21:19 IST)
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿನ ವಿನಾಯಕ ನಗರದ ಮನೆಯೊಂದರಲ್ಲಿ ನದೀಮ್, ಅಬ್ದುಲ್ ಖಾದರ್, ಶರಣಪ್ರಕಾಶ್ ಬಳಿಗೇರ, ಎಂಬುವವರು ಮುಂಬಯಿ ಮೂಲದ ಮಾಡಲ್ ಒಬ್ಬಳ ಪೋಟೋ ಇರುವ ಡಿಪಿ ಬಳಸಿ ಟೆಲಿಗ್ರಾಂ ನಲ್ಲಿ ಚಾಟ್ ಶುರುಮಾಡ್ತಾರೆ.. ನನ್ನ ಗಂಡ ದುಬೈ ನಲ್ಲಿದ್ದಾನೆ. ನಾನು ಒಬ್ಬಳೇ ಮನೆಯಲ್ಲಿ ಇದೀನಿ ಅಂತಾ ಯುವಕರನ್ನು ಖೆಡ್ಡಾಗೆ ಬೀಳಿಸ್ತಾರೆ. ಯಾವಾಗ ಬಕ್ರ ಬೊನಿಗೆ ಬಿತ್ತು ಅಂತಾ ಗೊತ್ತಾಗುತ್ತೋ, ಆಗ ಮುಂಬಯಿ ನಿಂದ ಮಾಡಲ್ ಮೆಹರ್ ಅಲಿಯಾಸ್ ನೇಹಾ ಬೆಂಗಳೂರಿಗೆ ಎಂಟ್ರಿ ಕೊಡ್ತಾಳೆ.

ಈ ಗ್ಯಾಂಗ್ ನ ಕಿಂಗ್ ಪಿನ್ ಈ ಶರಣಪ್ರಕಾಶ್ ಬಳಿಗೇರ.. ವಿದೇಶದಲ್ಲಿ ಎಂಬಿಎ ಮಾಡಿರೋ ಈತ ಸುಲಭವಾಗಿ ಹಣ ಮಾಡಲು ತನ್ನದೇ ಗ್ಯಾಂಗ್ ನ್ನ ಕಟ್ಕೊಂಡು ಈ ದಂಧೆಗಿಳಿದಿದ್ದ.. ಇದಕ್ಕೆ ಆರೋಪಿ ಯಾಸಿನ್ ಬಳಸಿ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ. ಯಾವಾಗ ಕಸ್ಟಮರ್ ಗಳು ಬಲೆಗೆ ಬೀಳ್ತಾರೋ ಅವರನ್ನ ಈ ಬಾಡಿಗೆ ಮನೆಗೆ ಕರೆತಂದು ಹನಿಟ್ರಾಪ್ ಮಾಡ್ತದ್ರು. ಇದೇ ರೀತಿ ಬರೊಬ್ಬರಿ 12 ಮಂದಿಗೆ ಈ ರೀತಿ ಬೆದರಿಸಿ 30 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿರೋದು ಗೊತ್ತಾಗಿದೆ.. ಇನ್ನೂ ಹಲವರಿಗೆ ಇದೇ ರೀತಿ ಮಾಡಿರೋ ಬಗ್ಗೆ ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ.. ಸದ್ಯ ಮಾಡೆಲ್ ನೇಹಾ ಅಲಿಯಾಸ್ ಮೆಹರ್, ನದೀಮ್ ಎಸ್ಕೇಪ್ ಆಗಿದ್ದಾರೆ.. ಈ ಇಬ್ಬರ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಅವರ ಬಂಧನದ ನಂತರ ಮತ್ತಷ್ಟು ಸ್ಟೋಟಕ ಮಾಹಿತಿಗಳು ಹೊರಗೆ ಬರಬೇಕಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ