ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದ ಕಾಮುಕರು...!

ಮಂಗಳವಾರ, 1 ಆಗಸ್ಟ್ 2023 (14:32 IST)
ಮೂವರು ಕಾಮುಕರಿಂದ ನಡೆದ ನಿರಂತರ ಅತ್ಯಾಚಾರದಿಂದ ನೊಂದ ಸಂತ್ರಸ್ತೆ ಕೊನೆಗೂ ಕಾಮುಕರ ಕಾಟ ತಾಳಲಾರದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಸಂಬಂಧ ಆಕೆಯ ಮಾಜಿ ಪ್ರೇಮಿ ಆ್ಯಂಡಿ ಜಾರ್ಜ್ @ ಹ್ಯಾಕ್ಲಿ , ಶಶಿಕುಮಾರ್ ಹಾಗು ಸಂತೋಷ್ ಎಂಬ ಮೂವರನ್ನ ಬಂಧನ ಮಾಡಲಾಗಿದೆ .ವೃತ್ತಿಯಲ್ಲಿ ಡ್ಯಾನ್ಸ್‌ ಮಾಸ್ಟರ್‌ ಆಗಿರುವ ಜಾರ್ಜ್‌ ಹ್ಯಾಕ್ಲಿ, ಕಳೆದ ಎರಡು ವರ್ಷದಿಂದ ಕಾಲೇಜು ಯುವತಿಯ ಜೊತೆ ಪ್ರೇಮ ವ್ಯವಹಾರ ಇಟ್ಟುಕೊಂಡಿದ್ದ. ಇತ್ತೀಚೆಗೆ ಕ್ಯಾರೆಕ್ಟರ್‌ ಸರಿ ಇಲ್ಲ ಎಂಬ ಕಾರಣ ನೀಡಿ ಯುವತಿ ಜಾರ್ಜ್‌ ನಿಂದ ದೂರವಾಗಿದ್ದಳು. ಆದ್ರೆ ಜಾರ್ಜ್‌ ಹ್ಯಾಕ್ಲಿ ಮಾತ್ರ ಯುವತಿಯ ಹಿಂದೆ ಬಿದ್ದಿದ್ದ. ಕಳೆದ ಜನವರಿಯಂದು ಆಕೆಯನ್ನ ಕಿಡ್ನ್ಯಾಪ್‌ ಮಾಡಿ ವಿದ್ಯಾರಣ್ಯಪುರ ಬಳಿ ಇರುವ  ಗ್ಯಾರೇಜೊಂದರಲ್ಲಿ ಇಟ್ಟುಕೊಂಡು  ಅತ್ಯಾಚಾರ ಎಸಗಿದ್ದ . ನಂತರ ಅದನ್ನ ವಿಡಿಯೋ ಕೂಡ ಮಾಡಿದ್ದ. ಮೊದಲು ಸತತ ಒಂದು ತಿಂಗಳವರೆಗೆ ಈತನೊಬ್ಬನೇ ವಿಡಿಯೋ ತೋರಿಸಿ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. 

ಬಂಧಿತರಾಗಿರುವ  ಶಶಿ ಹಾಗು ಸಂತೋಷ್‌ ಕೂಡ ನಿರಂತರವಾಗಿ ಅತ್ಯಾಚಾರ ಎಸಗಿದವರೆ. ವಿಡಿಯೋ ವಿಚಾರ ಮಾತನಾಡಿ ರೂಮಿಗೆ ಕರೆಸಿಕೊಂಡು ಸ್ನೇಹಿತರ ಜೊತೆಗೆ ಬಲವಂತವಾಗಿ ಮಲಗಲು ಹೇಳ್ತಿದ್ದ. ಹೀಗೆ ಸುಧೀರ್ಘ ಆರು ತಿಂಗಳವರೆಗೆಗೂ ಬ್ಲಾಕ್‌ ಮೇಲ್‌ ಮಾಡುತ್ತ ಅತ್ಯಾಚಾರವನ್ನ ಎಸಗುತ್ತಿದ್ದ. ಇತ್ತೀಚಿಗೆ ಯುವತಿ ತಾನು ಕರೆದಲ್ಲಿಗೆ ಬಂದಿಲ್ಲ ಎಂಬ ಕಾರಣಕ್ಕೆ ಇನ್ಸ್ಟಸ್ಟ್ರಾ ಗ್ರಾಂನಲ್ಲಿ ಅತ್ಯಾಚಾರದ  ವಿಡಿಯೋಗಳನ್ನ ಹರಿ ಬಿಟ್ಟು ಅದರ ಲಿಂಕ್‌ನ್ನು ಆಕೆಯ ಸ್ನೇಹಿತರಿಗೆ ಸಂಬಂಧಿಕರಿಗೆ ಹರಿ ಬಿಟ್ಟಿದ್ದ.  ಈ ಬೆಳವಣಿಗೆಯಿಂದಾಗಿ ನೊಂದ ಯುವತಿ, ಕೊನೆಗೆ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿರುವುದು ಗೊತ್ತಾದ ಕೂಡಲೇ ಆರೋಪಿಗಳು ಪರಾರಿಯಾಗಿದ್ದರು. ನಂತರ ನಿರಂತರ ಹುಡುಕಾಟದಿಂದಾಗಿ ಕೊನೆಗೂ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ. ಇನ್ನು ಎರಡನೇ ಆರೋಪಿ ಶಶಿ ಎಂಬಾತ ತಾನು ಮಾನಸಿಕ ಅಸ್ವಸ್ಥ ಎಂದು ಸುಳ್ಳು ಹೇಳಿ ನಿಮ್ಯಾನ್ಸ್‌ನಿಂದ ಸರ್ಟಿಫಿಕೇಟ್‌ ಪಡೆದಿದ್ದನಂತೆ. ಅಷ್ಟೆ ಅಲ್ಲದೆ ತಾನು ಅಂಗವಿಕಲ ಎಂದು ಸರ್ಕಾರದಿಂದ ಪಿಂಚಣಿ ಕೂಡ ಪಡೆಯುತ್ತಿದ್ದನಂತೆ . ಸದ್ಯ ಆರೋಪಿಗಳನ್ನ ಬಂಧಿಸಿ ನಾಲ್ಕು ಮೊಬೈಲ್‌ಗಳನ್ನ ವಶಕ್ಕೆ ಪಡೆಸಿದ್ದಾರೆ.
 
ಸದ್ಯ ಆರೋಪಿಗಳು ಈ ಹಿಂದೆ ಈ ರೀತಿಯ ಕೃತ್ಯಗಳನ್ನ ಎಸಗಿದ್ದಾರಾ ಎಂಬುದರ ಬಗ್ಗೆ ಕೂಡ ಪರಿಶೀಲನೇ ನಡೆಸಲಾಗ್ತಿದೆ. ಹೀಗಾಗಿ ಮೊಬೈಲ್‌ನಲ್ಲಿರುವ ವಿಡಿಯೋಗಳ ಪರಿಶೀಲನೇ ಕೂಡ ನಡೆಯುತ್ತಿದೆ. ಸದ್ಯ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ