ಹಣಕ್ಕೆ ಡಿಮ್ಯಾಂಡ್ ಮಾಡಿ ಲಾಕ್ ಆದ ಯೂಟ್ಯೂಬ್ ಚಾನಲ್

ಮಂಗಳವಾರ, 1 ಆಗಸ್ಟ್ 2023 (18:11 IST)
ಸುದ್ದಿ‌ ಪ್ರಸಾರ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್ ಮಾಲೀಕ ಸೇರಿ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಯೂಟ್ಯೂಬ್ ಚಾನೆಲ್ ವಾಗಿರುವ ಎ.ಕೆ.ನ್ಯೂಸ್ ಮಾಲೀಕ ಆತ್ಮಾನಂದ, @ ಆನಂದ, ಶ್ರೀನಿವಾಸ್, ಕೇಶವಮೂರ್ತಿ ಎಂಬುವರನ್ನು ಬಂಧಿಸಲಾಗಿದೆ. ಯೂಟ್ಯೂಬ್ ಚಾನಲ್ ಓನರ್  ಆತ್ಮಾನಂದ ಹಲವು ವರ್ಷಗಳಿಂದ ಚಾನೆಲ್‌ ನಡೆಸುತ್ತಿದ್ದ.‌ ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಸ್ಥಳಕ್ಕೆ ಹೋಗಿ ವಿಡಿಯೋ ಮಾಡುತ್ತಿದ್ದ ನಂತರ ಸುದ್ದಿ ಪ್ರಸಾರ ಮಾಡುತ್ತೇನೆ,‌ ಪೊಲೀಸರಿಗೆ ಹೇಳಿ‌ ಕೇಸ್ ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದ.

ಸುದ್ದಿ onair ಆದರೆ ತಮ್ಮ‌ ಕಳ್ಳಾಟ ಬಯಲಾಗುತ್ತೆ ಎಂದು ಹೆದರುತ್ತಿದ್ದ  ದಂಧೆಕೋರರು ಆರೋಪಿಗಳಿಗೆ ಹಣ ನೀಡುತ್ತಿದ್ದರು. ಇದನ್ನೇ ಬಂಡವಾಳ‌ ಮಾಡಿಕೊಳ್ಳುತ್ತಿದ್ದ ಆರೋಪಿಗಳು  ನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ರಹಸ್ಯ ವಿಡಿಯೊ ಮಾಡಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಸುತ್ತಿದ್ದರು. ಈ ಹಿಂದೆ‌ ಕೂಡ  ಕೆಮಿಕಲ್ಸ್ ದಂಧೆ, ಗ್ಯಾಸ್ ರಿಫೀಲಿಂಗ್ಸ್, ಅಕ್ರಮವಾಗಿ ದನದ ಮಾಂಸ ಮಾರಾಟ ಹೀಗೆ ನಾನಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರನ್ನ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದರು.
ಕೆ.ಆರ್‌.ಪುರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ಡ್ರಿಲ್ ಮಾಡುತ್ತಿದ್ದಾರೆ. ಇಂತಹ ಯೂಟ್ಯೂಬ್ ಚಾನಲ್ ಗಳ ಕಳ್ಳಾಟಕ್ಕೆ . ಬೆದರಿಕೆಗೆ ಕಡಿವಾಣ ಹಾಕಬೇಕು ಇಲ್ಲ ಅಂದ್ರೆ ಜನಕ್ಕೆ‌ ತಪ್ಪು ಸಂದೇಶ ಹೋಗುತ್ತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ