ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ

ಮಂಗಳವಾರ, 25 ಸೆಪ್ಟಂಬರ್ 2018 (20:00 IST)
ಕಳೆದ ಮೇ ತಿಂಗಳಿನಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿಲ್ಲ. ಮೊದಲೇ ಹೈದ್ರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ. ಅಧ್ಯಕ್ಷರ ನೇಮಕ ಆಗದ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕದ ಆರೂ ಜಿಲ್ಲೆಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ವರ್ಷ  ಹೆಚ್ಕೆಆರ್ಡಿಬಿಗೆ 1000 ಕೋಟಿ ಬಂದಿದೆ. ಈ ಸಲ ಕೂಡ 1000 ಕೋಟಿ ಬಂದಿದೆ. ಇನ್ನೂ 500 ಕೋಟಿ ರೂ. ಅನುದಾನ ಬರುವುದಿದೆ. ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು. ಕಮಿಟಿಯಲ್ಲಿ ಡಿಸಿಗಳು ಮತ್ತು ಸಿಇಒ ಗಳು ಇದ್ದಾರೆ. ಡಿಸಿಯವರು ಕಮಿಟಿ ಸದಸ್ಯರಿದ್ದಾರೆ ಮತ್ತು ಸಿಇಒ ಅವರಿಗೆ ಜಿಲ್ಲಾ ಪಂಚಾಯತ್ ಸಮಸ್ಯೆಗಳನ್ನು ಬಗೆಹರಿಸುವದರಲ್ಲೆ ಟೈಮ್ ಹೋಗುತ್ತದೆ.  ಈಗಾಗಲೇ ಈ ಭಾಗದಲ್ಲಿ ಮಳೆಯ ಕೊರತೆ ಇದೆ. ಮೂಲಭೂತ ಸೌಕರ್ಯಗಳ ಕೊರತೆ  ಹೆಚ್ಚಿವೆ. ಜನ ಸಂಕಷ್ಟದಲ್ಲಿದ್ದಾರೆ.  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರು ಕಳೆದ ಸಲ ಕಲಬುರ್ಗಿಗೆ ಬಂದಾಗ ಅಧ್ಯಕ್ಷನ್ನು ನೇಮಕ ಮಾಡುತ್ತನೆ ಅಂದಿದ್ರು ಇಲ್ಲಿಯ ವರೆಗೂ ನೇಮಕ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ  ಜೆಡಿಎಸ್ ಮತ್ತು ಕಾಂಗ್ರೆಸ್ ನ ಸಮಸ್ಯೆಗಳನ್ನು ಬೇಗ  ಬಗೆಹರಿಸಿಕೊಂಡು  ಇತ್ತ ಗಮನ ಹರಿಸಬೇಕು ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಆಗ್ರಹಿಸಿದ್ದಾರೆ.

ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲಾ ಉಸ್ತುವಾರಿ ಸಚಿವರಗಳ  ಪೈಕಿ ಒಬ್ಬರನ್ನು ಎಚ್ ಕೆ ಆರ್ ಡಿ ಬಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಒಬ್ಬ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ. ಅವರು ಒಬ್ಬರೇ ಏನೂ ಮಾಡಲು ಆಗಲ್ಲ. ಸಿಬ್ಬಂದಿಗಳ  ಕೊರತೆ ಇದೆ. ಕೂಡಲೆ ಸಿಬ್ಬಂದಿಗಳನ್ನು ನೇಮಕ ಮಾಡಿ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ