ಸೌಂದರ್ಯವರ್ಧನೆಯಲ್ಲಿ ಸಬ್ಬಕ್ಕಿಯ ಬಳಕೆ ಹೇಗೆ ಎಂದು ನಿಮಗೆ ತಿಳಿದಿದೆಯೇ?

ಮಂಗಳವಾರ, 25 ಸೆಪ್ಟಂಬರ್ 2018 (18:33 IST)
ಸಬ್ಬಕ್ಕಿಯನ್ನು ನಾವು ಸಾಮಾನ್ಯವಾಗಿ ಪಾಯಸ ಮಾಡುವಾಗ ಬಳಸುತ್ತೇವೆ. ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಐರನ್ ಅಂಶಗಳು ಯಥೇಚ್ಛವಾಗಿವೆ. ಕೇವಲ ಆಹಾರ ಪದಾರ್ಥಗಳಲ್ಲಿ ಅಷ್ಟೇ ಅಲ್ಲದೇ ಸಬ್ಬಕ್ಕಿಯನ್ನು ಸೌಂದರ್ಯವರ್ಧನೆಯಲ್ಲಿಯೂ ಬಳಸಬಹುದು. 
- ಮುಖ ಕಪ್ಪಗಾಗಿದೆ ಎಂದೆನಿಸಿದರೆ ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆಯುವುದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.
 
- ಸಬ್ಬಕ್ಕಿ ಪುಡಿಯನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದಲೂ ಸಹ ಸ್ಕಿನ್ ಹೊಳೆಯುತ್ತದೆ.
 
- ಸಬ್ಬಕ್ಕಿ ಪುಡಿಯನ್ನು ಕಡ್ಲೆಹಿಟ್ಟು ಮತ್ತು ಮೊಸರು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖ ಹೊಳೆಯುತ್ತದೆ.
 
- ಕೂದಲು ತುಂಬಾ ಉದುರುತ್ತಿದ್ದರೆ ಸಬ್ಬಕ್ಕಿಯನ್ನು ಆಲಿವ್ ಆಯಿಲ್‌ನಲ್ಲಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆಯ ನಂತರ ತೊಳೆದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
 
- ಮೊಡವೆಗಳಾದಾಗ ಮುಖದ ಮೇಲೆ ಕಲೆಗಳು ಉಳಿದಿರುತ್ತವೆ. ಈ ಸಂದರ್ಭದಲ್ಲಿ ಸಬ್ಬಕ್ಕಿಯ ಪುಡಿಯನ್ನು ಜೇನು ಮತ್ತು ನಿಂಬೆಯ ರಸದೊಂದಿಗೆ ಮಿಕ್ಸ್ ಮಾಡಿ ಹಚ್ಚುವುದರಿಂದ ಮುಖದ ಮೇಲಿನ ಎಲ್ಲಾ ಕಲೆಯು ನಿವಾರಣೆಯಾಗುತ್ತದೆ.
 
- ಕೂದಲು ಹೊಳೆಯುವಂತೆ ಮಾಡಲು ಸಬ್ಬಕ್ಕಿ ಪುಡಿಯನ್ನು ಮೊಸರು, ಜೇನು ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಹೊಳೆಯುತ್ತದೆ.
 
- ಬಿಸಿಲಿನಲ್ಲಿ ಓಡಾಡಿದಾಗ ತ್ವಚೆಯು ಟ್ಯಾನ್ ಆಗುತ್ತದೆ ಆಗ ಸಬ್ಬಕ್ಕಿ ಪುಡಿಯನ್ನು ಹಾಲು ಮತ್ತು ಅರಿಶಿನದ ಜೊತೆ ಸೇರಿಸಿ ಸ್ಕಿನ್‌ಗೆ ಹಚ್ಚುವುದರಿಂದ ತ್ವಚೆಯು ಟ್ಯಾನ್ ಆಗುವುದು ದೂರವಾಗುತ್ತದೆ.
 
- ವಯಸ್ಸಾದಾಗ ಮುಖದ ಮೇಲೆ ನೆರಿಗೆ ಬರುವುದು ಸಹಜ. ಆಗ ಸಬ್ಬಕ್ಕಿಯ ಪುಡಿಯನ್ನು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಕ್ಸ್ ಮಾಡಿ ಹಚ್ಚಿದರೆ ಸುಕ್ಕು ನಿವಾರಣೆಯಾಗುತ್ತದೆ.
 
ಈಗೀಗ ಸಾಮಾನ್ಯವಾಗಿ ಎಲ್ಲಾ ವಯೋಮಾನದವರು ಮೇಕಪ್ ಇಲ್ಲದೇ ಹೊರಹೋಗುವುದೇ ಇಲ್ಲ. ಮೇಕಪ್ ಅತಿಯಾದರೂ ಚರ್ಮರೋಗಗಳು ಬರುವ ಸಾಧ್ಯತೆಗಳಿರುತ್ತದೆ. ಇವುಗಳನ್ನು ತಡೆಗಟ್ಟಲು ಇಂತಹ ಆಹಾರ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಅವು ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಇಲ್ಲವಾದರೆ ಅಲರ್ಜಿ, ಕಜ್ಜಿ, ನವೆ, ಕೆರೆತಗಳಂತಹ ಚರ್ಮರೋಗಗಳು ಕಾಡುತ್ತವೆ. ಈ ರೋಗಗಳು ಕಂಡುಬಂದಾಗ ಅವುಗಳನ್ನು ನಿರ್ಲಕ್ಷಿಸದೇ ಆರಂಭದಲ್ಲಿಯೇ ವೈದ್ಯರನ್ನು ಕಾಣುವುದು ಉತ್ತಮ. ಏಕೆಂದರೆ ಎಲ್ಲಾ ಪದಾರ್ಥಗಳು ಎಲ್ಲರಿಗೂ ಒಂದೇ ರೀತಿಯ ಪರಿಣಾಮಗಳನ್ನು ನೀಡುವುದಿಲ್ಲ. ಆದ್ದರಿಂದ ಮುಖಕ್ಕೆ, ಕೂದಲಿಗೆ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರನ್ನು ಕಂಡು ಅವರ ಸಲಹೆಗಳನ್ನು ಕೇಳುವುದು ಉತ್ತಮ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ