ಫೆಬ್ರವರಿ 10ಕ್ಕೆ ಬೆಂಗಳೂರಿಗೆ ಬರಲಿರುವ ಗೃಹ ಸಚಿವ ಅಮಿತ್ ಶಾ

geetha

ಸೋಮವಾರ, 5 ಫೆಬ್ರವರಿ 2024 (14:01 IST)
ಬೆಂಗಳೂರು-ಯಡಿಯೂರಪ್ಪ ಅವರ ಕೃಪಾಕಟಾಕ್ಷ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದಾರೆ ಅಂತ ಡಿಕೆಶಿ ಹೇಳಿಕೆ ವಿಚಾರವಾಗಿ ನಗರದಲ್ಲಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.ಲೋಕಸಭಾ ಚುನಾವಣೆಗೆ ತೋರಿಸ್ತೀವಲ್ಲ.ಕಾರ್ಯಕರ್ತರು ಏನು ಅನ್ನೋದು ಅವರಿಗೆ ತೋರಿಸ್ತಾರೆ.ಇನ್ನೂ ಹಾಸನ ಮತ್ತು ಮಂಡ್ಯ ಬಿಜೆಪಿಗೆ ಸಿಗಲಿದೆ ಅನ್ನೋ ಪ್ರೀತಮ್ ಗೌಡ ಹೇಳಿಕೆ ವಿಚಾರವಾಗಿ ಎಲ್ಲರೂ ಕೂತು ಚರ್ಚೆ ಮಾಡ್ತೀವಿ.ಅದೆಲ್ಲ ನಾಲ್ಕು ಗೋಡೆ ಮದ್ಯೆ ಕೂತು ಚರ್ಚೆ ಮಾಡೋ ವಿಚಾರ.ಯಾರಿಗೆ ಸಿಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡ್ತಾರೆ.ಪಕ್ಕದಲ್ಲೇ ಇದ್ದ ಪ್ರೀತಮ್ ಗೌಡಗೆ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
 
ಅಮಿತ್ ಶಾ ರಾಜ್ಯಕ್ಕೆ ಬರುವ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಅವರು 10ಕ್ಕೆ ಬೆಂಗಳೂರಿಗೆ ಬರ್ತಿದ್ದಾರೆ.ಲೋಕಸಭಾ ಕ್ಲಸ್ಟರ್ ಮೀಟಿಂಗ್ ಮಾಡಲಿದ್ದೇವೆ.ಚರ್ಚೆ ಮಾಡಿ, ತದನಂತರ ಲೋಕಸಭಾ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಲಿದ್ದಾರೆ.ಇನ್ನೂ ಮಾಜಿ ಸಚಿವ ಸುಧಾಕರ್ ನಾನೇ ಚಿಕ್ಕಬಳ್ಳಾಪುರ ಅಭ್ಯರ್ಥಿ ಅನ್ನೋ ಹೇಳಿಕೆ ವಿಚಾರಕ್ಕೆ ಯಾವುದೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೀರ್ಮಾನ ಆಗಿಲ್ಲ.ರಾಜ್ಯದ 28 ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕು ಅಂತ ಬಿಜೆಪಿ ವರಿಷ್ಠರು ತೀರ್ಮಾನ ಮಾಡ್ತಾರೆ.ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಮಾಡ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ