ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಲು ಕಾರಣ ತಿಳಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ

ಗುರುವಾರ, 31 ಅಕ್ಟೋಬರ್ 2019 (10:09 IST)
ಬೆಂಗಳೂರು : ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡುವ ವಿಚಾರದ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.




ಟಿಪ್ಪು ಸುಲ್ತಾನ್ ಅನೇಕ ವಿವಾದಗಳನ್ನು ಹೊಂದಿರುವ ರಾಜ. ಹೀಗಾಗಿ ವಿದ್ಯಾರ್ಥಿಗಳು ಟಿಪ್ಪು ಇತಿಹಾಸ ಓದುವುದು ಬೇಡ. ಹೀಗಾಗಿ  ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಸರ್ಕಾರ ಸತ್ತೋಗಿದೆ ಎಂದ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಹತಾಶರಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಹಾಗೇ  ಟಿಪ್ಪು ವಿವಾದ ಉಪಚುನಾವಣೆಯ ಅಸ್ತ್ರವಾಗಿ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ವಿವಾದವನ್ನು ಅಸ್ತ್ರವಾಗಿ ಬಳಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ