ಶಿವರಾಜ್ ಕುಮಾರ್ ದೂರಿನ ಬಿಸಿಗೆ ಕರಗಿದ ಗೃಹಸಚಿವ ರಾಮಲಿಂಗಾ ರೆಡ್ಡಿ

ಗುರುವಾರ, 9 ನವೆಂಬರ್ 2017 (11:35 IST)
ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಕಿರಿ ಕಿರಿಯಾಗುತ್ತಿದೆಯೆಂದು ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ನೀಡಿದ್ದ ದೂರಿಗೆ ಗೃಹಸಚಿವ ರಾಮಲಿಂಗಾರೆಡ್ಡಿ ಸ್ಪಂದಿಸಿದ್ದಾರೆ.

 
ಮೊನ್ನೆಯಷ್ಟೇ ಗೃಹಸಚಿವರನ್ನು ಭೇಟಿಯಾಗಿದ್ದ ಶಿವಣ್ಣ ದಂಪತಿ, ತಮ್ಮ ಮನೆ ಪಕ್ಕದಲ್ಲಿ ಮಾನ್ಯಾತಾ ಟೆಕ್ ಪಾರ್ಕ್ ಬಳಿ ಪ್ರತಿನಿತ್ಯ ಸಾವಿರಾರು ವಾಹನಗಳು ಬರುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಿ ಎಂದು ಮನವಿ ಮಾಡಿದ್ದರು.

ಇದೀಗ ಸ್ಥಳಕ್ಕೆ ಭೇಟಿ ನೀಡಿದ ಗೃಹಸಚಿವರು ಖುದ್ದಾಗಿ ಅಲ್ಲಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು. ಇಲ್ಲಿ ಟ್ರಾಫಿಕ್ ಸಿಗ್ನಲ್ ಕಾರ್ಯ ವೈಖರಿಯನ್ನೂ ಪರಿಶೀಲಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ