ಟೆಕ್ ಪಾರ್ಕ್ ಸುತ್ತ ಟ್ರಾಫಿಕ್ ಕಿರಿಕಿರಿ: ಗೃಹಸಚಿವರಿಗೆ ಶಿವಣ್ಣ ದಂಪತಿ ದೂರು

ಮಂಗಳವಾರ, 7 ನವೆಂಬರ್ 2017 (14:53 IST)
ಬೆಂಗಳೂರು: ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಗೃಹಸಚಿವ ರಾಮಲಿಂಗಾರೆಡ್ಡಿಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ರು.

ವಿಧಾನಸೌಧದಲ್ಲಿ ಭೇಟಿಯಾದ ದಂಪತಿ ಹಾಗೂ ಮಾನ್ಯತಾ ಟೆಕ್ ಪಾರ್ಕ್ ಸುತ್ತಲ ನಿವಾಸಿಗಳು, ಅಲ್ಲಿನ ಟ್ರಾಫಿಕ್ ಕಿರಿಕಿರಿ ಬಗ್ಗೆ ದೂರು ನೀಡಿದರು. ಟೆಕ್ ಪಾರ್ಕ್ ನಿರ್ಮಾಣದ ವೇಳೆ ಅಲ್ಲಿಗೆ ಹೋಗುವ ವಾಹನಗಳಿಗೆ ರಸ್ತೆ ಕಲ್ಪಿಸಲ್ಲ ಎಂದು ಹೇಳಲಾಗಿತ್ತು. ಸದ್ಯ ಟೆಕ್ ಪಾರ್ಕ್ ನಲ್ಲಿ 1ಲಕ್ಷ 50 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 5 ಸಾವಿರಕ್ಕೂ ಹೆಚ್ಚು ವಾಹನಗಳು ಇಲ್ಲಿಗೆ ಬರುತ್ತಿದ್ದು, ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ದೂರು ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಮನೆಯ ಹತ್ತಿರ ಸಾಕಷ್ಟು ಟ್ರಾಫಿಕ್ ಪ್ರಾಬ್ಲಂ ಇದೆ. ಈ ಹಿಂದೆಯೂ ಮನವಿ ಮಾಡಿದ್ದೆವು. ಪಕ್ಕದಲ್ಲೇ ಟೆಕ್ ಪಾರ್ಕ್ ಕೂಡ ಇದೆ. ಹೀಗಾಗಿ ಬೇರೆಯವರ ಬಗ್ಗೆ ಆರೋಪ ಮಾಡುವುದಕ್ಕಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ ಎಂದು ಮನವಿ ಮಾಡಿದ್ದೇವೆ. ನಾಳೆ ಗೃಹ ಸಚಿವರು ಭೇಟಿ ಮಾಡಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ