ಹೊಟೇಲ್ ನುಗ್ಗಿ ದಾಂಧಲೆ: ಕಿಡಿಗೇಡಿಗಳ ವಿರುದ್ಧ ನಾಲ್ಕು ಎಫ್ಐಆರ್

ಗುರುವಾರ, 28 ಸೆಪ್ಟಂಬರ್ 2023 (17:40 IST)
ಬೆಂಗಳೂರು ಬಂದ್ ವೇಳೆ ಜಯನಗರದಲ್ಲಿ ನಡೆದಿದ್ದ ಗೂಂಡಾಗಿರಿ ಘಟನೆ ಸಂಬಂಧ  ಕಿಡಿಗೇಡಿಗಳ ವಿರುದ್ಧ ಪ್ರತ್ಯೇಕ ನಾಲ್ಕು ಎಫ್ಐಆರ್ ದಾಖಲಾಗಿದೆ‌.ಜಯನಗರದ ಉಡುಪಿ ಹಬ್ ಹೊಟೇಲ್ ನುಗ್ಗಿ ಮೇಜು-ಕುರ್ಚಿ ಸೇರಿ ಪೀಠೋಪಕರಣ ಧ್ವಂಸಗೊಳಿಸಿದ ಆರೋಪದಡಿ ವಿಶ್ವ ಹಾಗೂ ಶಿವ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.‌ ಉಡುಪಿ ಮಾತ್ರವಲ್ಲದೆ ಹೊಟೇಲ್ ಮಾತ್ರವಲ್ಲದೆ ‌ಮೋರ್ ಸೂಪರ್ ಮಾರ್ಕೆಟ್, ಕಾಫಿ ಡೇ ಹಾಗೂ ಪಿಲ್ಟರ್ ಕಾಪಿ ಹೊಟೇಲ್ ಗಳ ಮೇಲೆ ಆರೋಪಿಗಳು ದಾಂಧಲೆ ನಡೆಸಿದ್ದರು.‌ ಈ ಸಂಬಂಧ ಪ್ರತ್ಯೇಕವಾಗಿ ನೀಡಿದ ದೂರಿನ ಮೇರೆಗೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕೇಸರಿ ಶಾಲು ಧರಿಸಿ ಹೊಟೇಲ್ ನುಗ್ಗಿ  ದಾಂಧಲೆ‌ ನಡೆಸಿದ ಆರೋಪಿಗಳು ಶಾಸಕ ರಾಮಮೂರ್ತಿ ಕಡೆಯವರು ಎಂದು ಹೇಳಲಾಗಿತ್ತು. ಈ ಸಂಬಂಧ ಶಾಸಕರನ್ನ ವಶಕ್ಕೆ ಪಡೆದು ಪ್ರಶ್ನಿಸಲಾಗಿತ್ತು. ಈ ವೇಳೆ ಕಿಡಿಗೇಡಿಗಳು ನಮ್ಮ ಪಕ್ಷದವರಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದರು.
 
ಈ ಬೆಳವಣಿಗೆ ಬೆನ್ನಲೇ ಉಡುಪಿ ಹೊಟೇಲ್ ಮಾಲೀಕರು‌ ಪ್ರತಿಕ್ರಿಯಿಸಿದ್ದು ನಿನ್ನೆ ನಡೆದ ಕೃತ್ಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಪೀಠೋಪಕರಣ ಧ್ವಂಸ ಸಂಬಂಧ‌ ಆಗಿದ್ದ ನಷ್ಟವನ್ನ ಶಾಸಕ ರಾಮಮೂರ್ತಿಯವರು ತುಂಬಿಕೊಡಲಿದ್ದಾರೆ.‌ ಘಟನೆಯನ್ನ ದೊಡ್ಡದು ಮಾಡಬೇಡಿ ಎಂದು ಮನವಿ‌ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದ್ದು ಕೃತ್ಯ ಸಂಬಂಧ ಕಿಡಿಗೇಡಿಗಳಿಗೂ ನಮಗೂ ಸಂಬಂಧವಿಲ್ಲ.. ಆಗಬಾರದು ಆಗಿಹೋಗಿದೆ.‌ ಹೊಟೇಲ್‌ಮಾಲೀಕರಿಗೆ ಆಗಿರುವ ನಷ್ಟವನ್ನ ತುಂಬಿಕೊಡುವೆ ಎಂದಿದ್ದಾರೆ.
 
ಪ್ರಕರಣ ಹಿನ್ನೆಲೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನ ಖಂಡಿಸಿ  ಬೆಂಗಳೂರು ಬಂದ್‌ ಸಂದರ್ಭದಲ್ಲಿ ಹೋಟೆಲ್ ಗೆ ನುಗ್ಗಿದ ಕಿಡಿಗೇಡಿಗಳು ಸರಣಿ ದಾಂಧಲೆ ನಡೆಸಿದ್ದರು. ಬಂದ್ ಸಂದರ್ಭದಲ್ಲಿ ಜಯನಗರದ ಕೆಲ ಹೋಟೆಲ್‌ಗಳಿಗೆ ಕನ್ನಡ ಶಾಲು ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು 'ಹೊಟೇಲ್ ಮುಚ್ಚಿಲ್ಲವೆಂದು ಪೀಠೋಪಕರಣನ್ನ ಎಸೆದು, ಜಖಂಗೊಳಿಸಿ  ದಾಂಧಲೆ ಮಾಡಿದ್ದರು. ಕಿಡಿಗೇಡಿಗಳ ಕೃತ್ಯ ಹೋಟೆಲ್ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ