ರೈಲು ಪ್ರಯಾಣಿಕರೇ ಹುಷಾರ್! : ಯುವಕರಿಗೆ ಮತ್ತು ಬರೋ ಚಾಕ್ಲೇಟ್ ನೀಡಿ ದರೋಡೆ

ಗುರುವಾರ, 14 ಸೆಪ್ಟಂಬರ್ 2023 (12:02 IST)
ಬೆಳಗಾವಿ : ರೈಲು ಪ್ರಯಾಣದ ವೇಳೆ ವಿಷಾಹಾರ ಸೇವಿಸಿ 8 ಜನ ಯುವಕರು ಅಸ್ವಸ್ಥರಾಗಿದ್ದರು. ಆದರೆ ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. 8 ಜನ ಯುವಕರಿಗೆ ಮತ್ತು ಬರುವ ಚಾಕ್ಲೇಟ್, ಚಿಪ್ಸ್ ನೀಡಿ ಮೊಬೈಲ್ ಹಣ ದರೋಡೆ ಮಾಡಿರುವ ಆರೋಪ ಕೇಳಿಬಂದಿದೆ.
 
ಗೋವಾದಿಂದ ಬರುತ್ತಿದ್ದ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 8 ಯುವಕರು ಏಕಾಏಕಿ ಅಸ್ವಸ್ಥರಾಗಿದ್ದರು. ಈ ವೇಳೆ ಅವರನ್ನು ಬೆಳಗಾವಿ ರೈಲ್ವೆ ಪೊಲೀಸರು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ಗೋವಾ-ಕರ್ನಾಟಕ ಮಧ್ಯೆ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ ನೋಡುವುದಾದರೆ ಮತ್ತು ಬರುವ ಚಾಕ್ಲೇಟ್, ಚಿಪ್ಸ್ ನೀಡಿ ಚಿನ್ನಾಭರಣ, ಹಣ, ಮೊಬೈಲ್ ದೋಚುವ ಗ್ಯಾಂಗ್ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದೇ ಗ್ಯಾಂಗ್ನ ಖೆಡ್ಡಾಗೆ 8 ಜನ ಪ್ರಯಾಣಿಕರು ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು 48 ಗಂಟೆ ಬಳಿಕ ಪೂರ್ಣ ಪ್ರಮಾಣದಲ್ಲಿ ಯುವಕರು ಸುಧಾರಿಸಿಕೊಳ್ಳುತ್ತಿದ್ದಾರೆ.

ಐಸಿಯುನಲ್ಲಿ ಓರ್ವ, ಜನರಲ್ ವಾರ್ಡ್ನಲ್ಲಿ 7 ಯುವಕರಿಗೆ ಚಿಕಿತ್ಸೆ ನೀಡಲಾಗಿದೆ. ಈ ಯುವಕರಿಗೆ ಖದೀಮರು ತಿನ್ನಲು ಚಾಕ್ಲೇಟ್ ಮತ್ತು ಕುರುಕುರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ