ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅವಘಡ

ಭಾನುವಾರ, 17 ಸೆಪ್ಟಂಬರ್ 2023 (21:00 IST)
ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮಾರತಹಳ್ಳಿಯ ಮುನೇನಕೊಳಲು ವಸಂತ ಲೇಔಟ್ ನಲ್ಲಿ ನಡೆದಿದೆ.ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ನಿಂದ ಅಗ್ನಿ ಅವಘಡ ಆಗಿದ್ದು,ಮನೆಯಲ್ಲಿದ್ದ ನಾಲ್ಕು ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರವಾಗಿದೆ.ಕಳೆದ ರಾತ್ರಿ ಗ್ಯಾಸ್ ಲೀಕ್ ಆಗಿದ್ದು ಬೆಳಗ್ಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಬೆಂಕಿ  ಹೊತ್ತುಕೊಂಡಿದೆ.ಸೆಲ್ವ ನಾಯಕ್, 54 ವರ್ಷ, ಸುಧಾ ಬಾಯಿ 34, ನಂದಿತಾ 15 ವರ್ಷ, ಮನೋಜ್ 12 ವರ್ಷ ಗಾಯಾಳುಗಳಾಗಿದ್ದು,ಇಂದು ಬೆಳಗ್ಗೆ 6:45 ರ ಸುಮಾರಿಗೆ ಘಟನೆ ನಡೆದಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ