ಹಫೀಜ್, ಗೌಸ್ ಪೀರ್, ಫಯಾಜ್ ಹಾಗೂ ಶೇಖ್ ಎಂಬವರು ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್ ನಲ್ಲಿ ಪ್ಯಾಕೇಜ್ ಬುಕ್ ಮಾಡಿ ನಂತರ ಅದನ್ನು ಕ್ಯಾನ್ಸಲ್ ಮಾಡಿ ಹಣ ನೀಡುವಂತೆ ಮಾಲೀಕನಿಗೆ ಪೀಡಿಸಿದ್ದು, ಇಲ್ಲವಾದಲ್ಲಿ ಟ್ರಾವೆಲ್ಸ್ ನ ಸಿಬ್ಬಂದಿ ಕಾರ್ತಿಕ್ ನನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಮಾಲೀಕ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲಿಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ತನಿಖೆಯಲ್ಲಿ ಆಂಧ್ರ ಪ್ರದೇಶದಲ್ಲಿ ಆರೋಪಿಗಳು ಇರುವುದು ಪತ್ತೆಯಾಗಿತ್ತು.
ಅಪಹರಣಕಾರರಿಗೆ ಅನುಮಾನ ಬಾರದಿರಲಿ ಎಂದು ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಕ್ರೈಂ ಸಿಬ್ಬಂದಿ ಪ್ರೇಮಿಗಳಂತೆ ನಟನೆ ಮಾಡಿ ಬಳಿಕ ಆರೋಪಿಗಳ ಸಮೀಪ ಹೋಗಿ ಅವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.