ದೇಶದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದ್ದು, ಅದನ್ನು ತಡೆಗಟ್ಟಲು ನದಿ ಜೋಡನೆ ಕಾರ್ಯ ಅವಶ್ಯವಾಗಿದೆ.
ನದಿ ಜೋಡಣೆ ಈ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್ ಲೋಕಲ್ ಅಧ್ಯಯನ ಕೇಂದ್ರವು ಸೆಪ್ಟೆಂಬರ್ 14 ಮತ್ತು 15ರಂದು ವಾಟರ್ ಮ್ಯಾನೇಜಮೆಂಟ್ ಥ್ರೋ ಇಂಟರ್ ಬೇಸಿನ್ ಟ್ರಾನ್ಸ್ಪರ್ ಎಂಬ ವಿಷಯದ ಮೇಲೆ ರಾಷ್ಟ್ರ ಮಟ್ಟದ ಸೇಮಿನಾರ್ ನ್ನು ಆಯೋಜಿಸಿದೆ. ಹೀಗಂತ ಎಸ್.ಜಿ ಬಾಳೆಕುಂದ್ರಿ ಕಾಲೇಜು ಪ್ರಿನ್ಸಿಪಲ್ ಎಂದು ಸಿದ್ರಾಮಪ್ಪಾ ಇಟ್ಟಿ ಹೇಳಿದ್ದಾರೆ.
ನೀರು ಜೀವಿಗಳಿಗೆ ಅವಶ್ಯಕವಾಗಿದೆ. ಇತ್ತಿಚಿನ ದಿನಗಳಲ್ಲಿ ಸಮರ್ಪಕವಾಗಿ ನೀರು ಸಿಗದೇ ಇರುವುದು ದುರ್ದೈವದ ಸಂಗತಿಯಾಗಿದೆ. ದೇಶಾದ್ಯಂತ ಇರುವ ನೀರಿನ ಸಮಸ್ಯೆ ಪರಿಹರಿಸಬೇಕೆಂದರೆ ನದಿ ಜೋಡನೆ ಯೋಜನೆ ಅವಶ್ಯಕವಾಗಿದೆ.
ಈ ಹಿಂದೆಯೇ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೆಯಿ ಅವರ ನಾಯಕತ್ವದಲ್ಲಿ ಕೇಂದ್ರ ಸಚಿವರಾಗಿದ್ದ ಸುರೇಶ ಪ್ರಭು ನೆತೃತ್ವದಲ್ಲಿ ಈ ಯೋಜನೆ ಮೂಲಕ ಉತ್ತರ ಮತ್ತು ದಕ್ಷಿಣದ ನದಿಗಳನ್ನು ಜೋಡಿಸಲು ಮುಂದಾಗಿದ್ದರು.
ಈ ಯೋಜನೆಯನ್ನು ಜಾರಿಗೆ ತರುವುದರಿಂದ ಪ್ರವಾಹ ಬರುವ ನದಿಗಳಿಂದ ನೀರು ಇಲ್ಲದಿರುವ ನದಿಗಳಿಗೆ ನೀರು ಹರಿಸಿದರೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ಮಟ್ಟದ ಸೆಮಿನಾರ್ ಆಯೋಜಿಸಲಾಗಿದೆ ಎಂದಿದ್ದಾರೆ.