ಹೋಟೆಲ್ ಗೆ ಹೋಗಿದ್ದ 50 ಜನರಿಗೆ ಬಿತ್ತು ದಂಡ

ಬುಧವಾರ, 27 ಮೇ 2020 (21:23 IST)
ಟಿಫಿನ್ ತಿಂದು ಟೀ ಕುಡಿಯೋಕೆ ಅಂತ ಹೋಗಿದ್ದ 50 ಜನರಿಗೆ ದಂಡ ವಿಧಿಸಲಾಗಿದೆ.

ತಲಾ 100 ರೂಪಾಯಿ ದಂಡ ವಿಧಿಸಲಾಗಿದ್ದು, ಹೋಟೆಲ್ ಗಳಿಗೆ ಬಂದವರು ಮಾಸ್ಕ್ ಧರಿಸಿರಲಿಲ್ಲ.

ಮಂಗಳೂರಿನ ಬೆಳ್ತಂಗಡಿಯಲ್ಲಿ ಲಾಕ್ ಡೌನ್ ನಿಯಮ ಪಾಲಿಸದ 7 ಹೋಟೆಲ್ ಗಳಿಗೆ ತಲಾ ಐದು ಸಾವಿರ ಹಾಗೂ ಮಾಸ್ಕ್ ಧರಿಸದೇ ಬಂದ 50 ಗ್ರಾಹಕರಿಗೆ ತಲಾ 100 ರೂಪಾಯಿ ದಂಡ ವಿಧಿಸಲಾಗಿದೆ.

ಲಾಕ್ ಡೌನ್ ನಿಯಮ ಪಾಲಿಸುವಂತೆ ಹಾಗೂ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಬಗ್ಗೆ ಅಧಿಕಾರಿಗಳು ತಿಳಿಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ