ನಕಲಿ ಅಧಿಕಾರಿ ಸೋಗಿನಲ್ಲಿ ಬಂದ ಹೈಟೆಕ್ ಕಳ್ಳಿ ದೋಚಿದ್ದು ಎಷ್ಟು?

ಗುರುವಾರ, 12 ಸೆಪ್ಟಂಬರ್ 2019 (18:51 IST)
ಹೈಟೆಕ್ ಕಳ್ಳಿಯೊಬ್ಬಳು ಮಳ್ಳಿ ಥರ ನಟಿಸಿ ವ್ಯಾಪಾರಿಗಳಿಂದ ಸಾವಿರಾರು ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಅಪರಿಚಿತ ಮಹಿಳೆಯೊಬ್ಬಳು ನಾನು ಆಹಾರ ಇಲಾಖೆಯಿಂದ ಬಂದಿರುವುದಾಗಿ ಪತ್ರಿ ಅಂಗಡಿ, ಹೋಟೆಲ್ ಗಳಿಗೆ ಹೋಗಿ ಲೈಸನ್ಸ್ ಮಾಡಿಸಿ ಇಲ್ಲವಾದರೆ ನಿಮ್ಮ ಅಂಗಡಿಗಳನ್ನು ಸೀಜ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಪ್ರತಿ ಅಂಗಡಿಯಿಂದ ತಲಾ 2000 ರೂ. ಪಡೆದು ವಂಚಿಸಿದ್ದಾಳೆ.

ಮಂಡ್ಯ ಕಿಕ್ಕೇರಿ ಪಟ್ಟಣದಲ್ಲಿ ಈಕೆಯನ್ನು ಸಾರ್ವಜನಿಕರು ವಿಚಾರಣೆ ನೆಡಸಿದಾಗ ಯಾವೋದು ಎನ್ ಜಿ ಓ ದಿಂದ  ಬಂದಿರುವಾಗಿ ತಿಳಿಸಿದ್ದಾಳೆ. ಈಕೆ ಮೇಲೆ ಅನುಮಾನಗೊಂಡ ಸಾರ್ವಜನಿಕರು ಈಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈಕೆ ಹಿಂದೆ ಒಂದು ಜಾಲವೇ ಇದ್ದು, ದಿನ ನಿತ್ಯ ಒಂದಾಲ್ಲ ಒಂದು ಪಟ್ಟಣಕ್ಕೆ ಹೋಗಿ ಆಹಾರ ಸುರಕ್ಷತೆ ಗುಣಮಟ್ಟ ಕಾನೂನು ಬಾಹಿರ ವ್ಯಾಪಾರ ನಿರ್ಮೂಲನ ಹೋರಾಟ ದಳ ಎಂದು ವಿಜಿಟಿಂಗ್ ಕಾರ್ಡ್ ನೀಡಿ ವಂಚಿಸುತ್ತಿದ್ದಾಳೆ.

ಈಕೆಯಿಂದ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡ ಮಂಜೇಗೌಡ ರವರನ್ನು ಸಂಪರ್ಕಿದಾಗ ನಾನು ಎಲ್ಲಿಗೂ ಬರೋದಿಲ್ಲ ಯಾವ ಕೇಸು ಬೇಕಾದ್ರೂ ಹಾಕೊಳ್ಳಿ ಅಂತ ಧಮ್ಕಿ ಹಾಕುತ್ತಿದ್ದಾನೆ. ಕಿಕ್ಕೇರಿ ಪಟ್ಟಣದಲ್ಲಿ ಸುಮಾರು 20 ಜನರಿಂದ  ಹಣ ವಸೂಲಿ ಮಾಡಿದ್ದಾಳೆ ಈ ಖತರ್ನಾಕ್ ಕಳ್ಳಿ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ