ಶಾಸಕರ ಹೊಸಾ ಸವಾರಿ ನೋಡಿದ್ರೆ ಹೌಹಾರುತ್ತೀರಾ..!
ಜನಪ್ರತಿನಿಧಿಗಳ ಗೆಲುವಿಗೆ ಪೂಜೆ, ದೀಡ್ ನಮಸ್ಕಾರ, ಹರಕೆ ಹೊತ್ತಿದ್ದನ್ನ ನಾವೆಲ್ಲ ಕೇಳಿದ್ದೇವೆ ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಸಾಮಿ ಶಾಸಕರಿಗೆ ನಿತ್ಯ ಸವಾರಿ ಮಾಡಿಸುತ್ತಿದ್ದಾನೆ.
ಚಿತ್ರವನ್ನು ನೋಡಿ ಶಾಸಕರ ಹೊಸಾ ಸವಾರಿ ಹಿರೋ ಹೋಡಾ SPLENDOR ಅಂದುಕೊಂಡ್ರಾ? ಹಾಗಿದ್ರೆ ನಿಮ್ಮ ಊಹೆ ಸುಳ್ಳು. ಚಳ್ಳಕೆರೆ ಶಾಸಕ ರಘುಮೂರ್ತಿ ಓಡಾಡೋಡು ಹೈಯಾಂಡ್ ಇನ್ನೋವ್ವಾದಲ್ಲೇ.
ಆದ್ರೆ ಚಳ್ಳಕೆರೆ ಕ್ಷೇತ್ರದ ಮತದಾರನೊಬ್ಬ ರಘುಮೂರ್ತಿ ಭಾವಚಿತ್ರ ಮತ್ತು ವಿದ್ಯಾರ್ಹತೆ ತನ್ನ ಬೈಕ್ ಮೇಲೆ ಹಾಕಿಸಿಕೊಂಡಿದ್ದಾನೆ.
ಇದನ್ನು ನೋಡಿದ್ರ ಶಾಸಕರ ಮೇಲಿನ ಅಭಿಮಾನವೋ? ಜಾತಿ ಪ್ರೇಮವೋ? ಅಥವಾ ಬಕೆಟ್ ಸಂಪ್ರದಾಯವೋ? ಒಂದೂ ತಿಳಿಯದಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.