ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಕುಸಿತ ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ಸೋಮವಾರ, 28 ಫೆಬ್ರವರಿ 2022 (21:18 IST)
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, 
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದ ದೈನಂದಿನ ಪ್ರಕರಣಗಳು 10,000 ಕ್ಕಿಂತ ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 8,013 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 119 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 8,013 ಹೊಸ #COVID19 ಪ್ರಕರಣಗಳು, 16,765 ಚೇತರಿಕೆಗಳು ಮತ್ತು 119 ಸಾವುಗಳು ಸಂಭವಿಸಿವೆ ಎಂದು ಭಾರತ ವರದಿ ಮಾಡಿದೆ.
ಸಕ್ರಿಯ ಪ್ರಕರಣ: 102601 (0.24%).
ದೈನಂದಿನ ಧನಾತ್ಮಕತೆ ದರ: 1.11%.
ಒಟ್ಟು ಚೇತರಿಕೆಗಳು: 4,23,07,686.
ಸಾವಿನ ಸಂಖ್ಯೆ: 5,13,843.
ಒಟ್ಟು ಲಸಿಕೆ: 1,77,50,86,335.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ