ಸಂಪ್ರದಾಯವನ್ನು ಒಪ್ಪಿಕೊಂಡು ಒಂದೇ ಯುವತಿಯನ್ನು ಅಪ್ಪಿಕೊಂಡ ಇಬ್ಬರು ಸಹೋದರರು

Sampriya

ಭಾನುವಾರ, 20 ಜುಲೈ 2025 (11:27 IST)
Photo Credit X
ಶಿಮ್ಲಾ: ಪೂರ್ವಜರು ಆಚರಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಸಹೋದರರಿಬ್ಬರು ಒಂದೇ ಯುವತಿಯನ್ನು ಮದುವೆಯಾಗಿದ್ದಾರೆ. 

ಅಪರೂಪದ ವಿವಾಹ ಸಮಾರಂಭದ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.  ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರ ಮದುವೆಗೆ ನೂರಾರು ಜನ ಸಾಕ್ಷಿಯಾಗಿದ್ದಾರೆ. ವಧು ಸುನೀತಾ ಚೌಹಾಣ್ ಮತ್ತು ವರ ಪ್ರದೀಪ್ ಮತ್ತು ಕಪಿಲ್ ನೇಗಿ ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 

ಸಂಪ್ರದಾಯದ ಬಗ್ಗೆ ನನಗೆ ಅರಿವಿತ್ತು. ಯಾವುದೇ ಒತ್ತಡವಿಲ್ಲದೆ ನಾನು ಈ ಮದುವೆಗೆ ಒಪ್ಪಿಕೊಂಡಿದ್ದೇನೆ. ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕುನ್ಹತ್ ಗ್ರಾಮದ ವಧು ಸುನೀತಾ ಹೇಳಿಕೊಂಡಿದ್ದಾರೆ.

 ಹಿಮಾಚಲ ಪ್ರದೇಶದಲ್ಲಿ ಇಂತಹ ಸಂಪ್ರದಾಯ ಇದೆ. ಟ್ರಾನ್ಸ್-ಗಿರಿಯ ಬಧಾನಾ ಗ್ರಾಮದಲ್ಲಿ ಕಳೆದ 6 ವರ್ಷಗಳಲ್ಲಿ ಇಂತಹ ಹಲವು ಮದುವೆಗಳು ನಡೆದಿವೆ. ನಮ್ಮ ಪೂರ್ವಜರ ಈ ಸಂಪ್ರದಾಯವನ್ನು ಒಪ್ಪಿಕೊಂಡಿದ್ದೇವೆ. ನಮಗೆ ಈ ಬಗ್ಗೆ ಹೆಮ್ಮೆಯಿದೆ ಎಂದು ಪ್ರದೀಪ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ