ಲೋನ್ ಬೇಕಾದವರಿಗೆ ನಕಲಿ ನೋಟು ತೋರಿಸಿ ನಂಬಿಸುತ್ತಿದ್ದ ಐನಾತಿಗಳು

ಶುಕ್ರವಾರ, 6 ಜನವರಿ 2023 (20:19 IST)
ಅವ್ರು ಕಂತೆ ಕಂತೆ ನೋಟು ಟೇಬಲ್ ಮೇಲೆ ಇಟ್ಕೊಳ್ತಿದ್ರು.ದೊಡ್ಡ ದೊಡ್ಡ ಫೈನಾನ್ಶಿಯರ್ ನಂತೆ ಬಿಲ್ಡಪ್ ಕೊಡ್ತಿದ್ರು.ಲೋನ್ ಬೇಕು ಅಂತಾ ಬಂದವರ ಬಳಿ ಅಗ್ರಿಮೆಂಟ್ ಮಾಡಿಸಿಕೊಳ್ತಿದ್ರು.ನಂತರ ನಂಬಿ ಬಂದವರಿಗೆ ನಾಮ ಹಾಕ್ತಿದ್ರು‌.ಹೀಗೆ ನಕಲಿ ನೋಟು ತೋರಿಸಿ ನವಟಂಕಿ ನಾಟಕ ಆಡ್ತಿದ್ದವರು ಸಿಸಿಬಿ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ಗರಿ ಗರಿ ನೋಟು..ಗರಿ ಗರಿ ನೋಟು..2000 ಮುಖಬೆಲೆಯ ನೋಟು ಒಂದ್ಕಡೆ ಆದ್ರೆ.500 ಮುಖ ಬೆಲೆಯ ನೋಟು ಮತ್ತೊಂದ್ಕಡೆ.ಇದೇನಪ್ಪ ಇಷ್ಟು ದುಡ್ಡು ಯಾರದ್ದು ಅಂತಾ ತಲೆ ಕೆಡಿಸ್ಕೊಬೇಡಿ.ಇದರ ಅಸಲಿಯತ್ತನ್ನೇ ನಿಮ್ಮ ಮುಂದೆ ಬಿಚ್ಚಿಡ್ತೀವಿ.ಈ ಕಥೆ ಹೇಳೋಕೆ ಮುನ್ನ ಈ ಮುಸುಡಿಗಳನ್ನೊಮ್ಮೆ ನೋಡ್ಕೊಂಡ್ ಬಿಡಿ.ಇವ್ನು ಪಿಚ್ಚುಮುತ್ತು,ಈತ ನಲ್ಲಕಣಿ,ಇನ್ನು ಈ ಆಸಾಮಿಯ ಹೆಸರು ಸುಬ್ರಹ್ಮಣಿಯನ್.ತಮಿಳುನಾಡು ಮೂಲದವರು.ತಮಿಳುನಾಡಿನಲ್ಲಿ‌ ಖೋಟಾ ನೋಟು ಮುದ್ರಿಸಿಕೊಂಡು ಬಂದು ಬೆಂಗಳೂರಲ್ಲಿ ದಂಧೆ ಮಾಡ್ತಿದ್ರು.ಆದ್ರೆ ಮಾಡಿದ ತಪ್ಪನ್ನೇ ಎಷ್ಟು ಅಲ ಅಂತಾ ಮಾಡೋಕೆ ಸಾಧ್ಯಹೇಳಿ.ಕೊನೆಗೂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನ ಸಿದ್ದಾಪುರದಲ್ಲಿ ಕಚೇರಿ ಮಾಡಿಕೊಂಡಿದ್ದ ಆರೋಪಿಗಳು,ಲೋನ್ ಬೇಕಾಗಿರುವವರಿಗೆ ತಾವು ಫೈನಾನ್ಶಿಯರ್  ಗಳು ಎಂದು ನಂಬಿಸಿ ಮಂಗ ಮಾಡ್ತಿದ್ರು.ಟೇಬಲ್ ಮೇಲೆ ಕಂತೆ ಖೋಟಾ ನೋಟು ಇಟ್ಟು ಬರುವವರಿಗೆ ಒರಿಜಿನಲ್ ನೋಟು ಅನ್ನೋ ರೀತಿ ಬಿಲ್ಡಪ್ ಕೊಡ್ತಿದ್ರು.ಲೋನ್ ಬೇಕಾದವರಿಗೆ ಪಿಚ್ಚ ಮುತ್ತು ಮತ್ತು ನಲ್ಲಕಣಿ ಫೈನಾನ್ಶಿಯರ್ ಎಂದು ಬಿಂಬಿಸಿಕೊಳ್ತಿದ್ರು.ಇನ್ನೂ ಸುಬ್ರಹ್ಮಣಿಯನ್ ಆಡಿಟರ್ ಎಂದು ಬಿಂಬಿಸಿಕೊಳ್ತಿದ್ದ.ಮೂರ್ನಾಲ್ಕು ಬಾರಿ ಮೀಟಿಂಗ್ ಮಾಡಿ ಲೋನ್ ಮಂಜೂರಾಗಿದೆ ಅಗ್ರಿಮೆಂಟ್ ಮಾಡಿಸಬೇಕು ಅಂತಾ ಉಪನೊಂದಣಾಧಿಕಾರಿ ಕಛೇರಿಗೆ ಕರೆದುಕೊಂಡು ಹೋಗ್ತಿದ್ರು.ಅಲ್ಲಿ ಅಗ್ರಿಮೆಂಟ್ ಚಾರ್ಜ್ 1% ನಂತೆ ನಗದು ರೂಪದಲ್ಲಿ ಅವರಿಂದಲೇ ಹಣ ಪಡಿತಿದ್ರು.ನಂತರ ಸಾಲ ಮಂಜೂರಾಗಿರುವ ಬಗ್ಗೆ ಒಂದು ಅಗ್ರಿಮೆಂಟ್,ಈಗಾಗಲೇ ಸಾಲ ಪಡೆದುಕೊಂಡಿರೋದಾಗಿ ಮತ್ತೊಂದು ಅಗ್ರಿಮೆಂಟ್ ಮಾಡಿಸಿಕೊಂಡು ಸಹಿಪಡೆದುಕೊಳ್ತಿದ್ರು.ನಂತರ ಲೋನ್ ಹಣ ಬೇಕೆಂದು ಒತ್ತಡ ಹಾಕಿದಾಗ ಆರೋಪಿಗಳು ಈಗಾಗಲೇ ಸಹಿ ಮಾಡಿಸಿಕೊಂಡಿದ್ದ ಅಗ್ರಿಮೆಂಟ್ ತೋರಿಸಿ ನೀನೆ ಈಗಾಗಾಲೇ ಲೋನ್ ಪಡೆದುಕೊಂಡಿದ್ದು ಹಣ ಕೊಡುವಂತೆ ಧಮ್ಕಿ ಹಾಕ್ತಿದ್ರು‌.
ಇದೇ ರೀತಿ ಲೋನ್ ನೀಡುವ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 2000 ಮತ್ತು 500 ರೂಪಾಯಿ ಮುಖಬೆಲೆಯ 1 ಕೋಟಿ 28 ಲಕ್ಷ ಮೌಲ್ಯದ ಖೋಟ ನೋಟು.ಖೋಟಾ ನೋಟು ತಯಾರಿಸಲು ಬಳಸುತ್ತಿದ್ದ ಮಷಿನ್,ಹಾರ್ಡ್ ಡಿಸ್ಕ್ ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಯಾರಿಗೆಲ್ಲ ಈ ರೀತಿ ವಂಚನೆ ಮಾಡಿದ್ದಾರೆ.ಇವರ ಜೊತೆಗೆ ಮತ್ಯಾರೆಲ್ಲ ಶಾಮಿಲಾಗಿದ್ದಾರೆ ಅನ್ನೋ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ