ಆಫ್ರಿಕಾ ಖಂಡದ ಕೆಟಾರಲ್ ಜ್ವರಕ್ಕೆ ನೂರಾರು ಹಸುಗಳು ಬಲಿ

ಗುರುವಾರ, 6 ಸೆಪ್ಟಂಬರ್ 2018 (14:24 IST)
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ಆಫ್ರಿಕಾ ಖಂಡದ ಪ್ರಾಣಿಗಳಲ್ಲಿ ಕಂಡು ಬರುವ ಕೆಟಾರಲ್(ಎಂಸಿಎಫ್) ಅಂಟು ರೋಗ ಕಂಡು ಬಂದಿದೆ. ಮೊದೂರು, ಹೊಸೂರು ಗ್ರಾಮಗಳಲ್ಲಿ ಈ ಭಯಾನಕ ರೋಗ ಕಂಡು ಬಂದಿದ್ದು ಇದುವರೆಗೂ 400 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ಲಕ್ಷಾಂತರ ಮೌಲ್ಯದ ಹಸುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಈ ರೋಗ ಹಸುಗಳಲ್ಲಷ್ಟೇ ಅಲ್ಲದೆ ಸಾಕು ಪ್ರಾಣಿಗಳಾದ ಕುರಿ, ಮೇಕೆ, ಎಮ್ಮೆ, ನಾಟಿ ಹಸುಗಳಲ್ಲಿಯೂ ಕಂಡು ಬರುತ್ತಿದೆ. ಹತ್ತಾರು ಬಾರಿ ಪಶುವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ರು ರೋಗ ನಿಯಂತ್ರಿಸಲು ಸಾದ್ಯವಾಗಿಲ್ಲ. ಮೃತ ಹಸುಗಳ ರಕ್ತ ಮಾದರಿಯನ್ನ ಪರೀಕ್ಷೆಗೊಳಪಡಿಸಿದ ವೈದ್ಯರು ಕೆಟಾರಲ್ ( ಎಂಸಿಎಫ್ ) ಎಂಬುದಾಗಿ ಪತ್ತೆ ಹಚ್ಚಿದ್ದಾರೆ.

ಈ ರೋಗ ನಿಯಂತ್ರಣ ಸಾಧ್ಯವಿಲ್ಲ  ಸತ್ತ ಹಸುಗಳನ್ನ ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿ ಬೇರೆ ಹಸುಗಳಿಗೆ ಹರಡಂತೆ ಕಾಪಾಡಬೇಕು ಅಷ್ಟೇ ಎಂದು ವೈದ್ಯರು ಕೈಚೆಲ್ಲಿದ್ದಾರೆ. ಗ್ರಾಮದಲ್ಲಿ ದಿನೆ ದಿನೇ ಕೆಟಾರಲ್ ರೋಗಕ್ಕೆ ಹಸುಗಳು ಸಾವನ್ನಪ್ಪುತ್ತಿದ್ದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ