74ನೇ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಇಂದು ಸಿಲಿಕಾನ್ ಸಿಟಿಯ ಮಂದಿ ಸಾವಿರಾರು ಸಂಖ್ಯೆಯಲ್ಲಿ ಬಂದು ಫ್ಲವರ್ ಶೋ ನೋಡಿ ಎಂಜಾಯ್ ಮಾಡಿದ್ರು. ಈ ಬಾರಿ ಬೆಂಗಳೂರು ನಗರದ ಇತಿಹಾಸ ಸಾರುವ ವಿವಿಧ ಸ್ಮಾರಕಗಳನ್ನ ನಿರ್ಮಿಸಿಲಾಗಿತ್ತು.ಕೆಂಪೇಗೌಡ ಗೋಪುರ .ಹೋಯ್ಸಳ ಲಾಂಚನ,ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಾಲಯ ಸೇರಿದಂತೆ ನೂರಕ್ಕೂ ಹೆಚ್ಚು ಬಗೆಯ ಕಲಾಕೃತಿಗಳನ್ನು ಹೂ ಗಳಿಂದ ತಯಾರು ಮಾಡಲಾಗಿತ್ತು.ಗ್ಲಾಸ್ ಹೌಸನ ಎರಡು ಕಡೆಗಳಲ್ಲಿ ಎಂಟ್ರಿ ಮಾಡಲಾಗಿತ್ತು .ಶಾಲಾ ಮಕ್ಕಳಿಗೆ ಉಚಿತವಾಗಿ ಎಂಟ್ರಿ ನೀಡಲಾಗಿತ್ತು.ಇನ್ನೂ ಮೂರು ದಿನಗಳ ನಡೆಯುವ ಈ ಕಾರ್ಯಕ್ರಮ ಕ್ಕೆ ಸಾವಿರಾರು ಜನ ಬರುವ ನೀರಿಕ್ಷೆಯಿದೆ.ಬರುವ ಸಾರ್ವಜನಿಕ ರಿಗೆ ಕುಡಿಯುವ ನೀರಿನ ವ್ಯವಸ್ಥೆ ಯನ್ನ ಕೂಡ ಮಾಡಲಾಗಿತ್ತು.