ಪತ್ನಿ ಕರಿಮಣಿ ಮಾಲಿಕ ನೀ ನಲ್ಲ ರೀಲ್ಸ್ ಮಾಡಿದ್ದಕ್ಕೆ ಜೀವ ಕಳೆದುಕೊಂಡ ಪತಿ

Krishnaveni K

ಶುಕ್ರವಾರ, 16 ಫೆಬ್ರವರಿ 2024 (11:30 IST)
ಚಾಮರಾಜನಗರ: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕರಿಮಣಿ ಮಾಲಿಕ ನೀ ನಲ್ಲ ರೀಲ್ಸ್ ವೈರಲ್ ಆಗಿದೆ. ಈ ರೀಲ್ಸ್ ನಿಂದ ಈಗ ಒಬ್ಬ ವ್ಯಕ್ತಿಯ ಜೀವಕ್ಕೇ ಕುತ್ತಾಗಿದೆ!

ಯಾರು ನೋಡಿದರೂ ಈಗ ಕರಿಮಣಿ ಮಾಲಿಕ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಅದೇ ರೀತಿ ರೂಪಾ ಎಂಬ ಗೃಹಿಣಿ ತನ್ನ ಸೋದರ ಮಾವ ಗೋವಿಂದ ಮತ್ತು ಸಹೋದರಿ ಯಶೋಧ ಜೊತೆ ಸೇರಿ ಕರಿಮಣಿ ಮಾಲಿಕ ನೀ ನಲ್ಲ ಹಾಡಿಗೆ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.

ಇದನ್ನು ಪತಿ ಕುಮಾರ್ (33) ಗೆ ಸ್ನೇಹಿತರು ತಿಳಿಸಿದ್ದರು. ರೀಲ್ಸ್ ನೋಡಿ ಸಿಟ್ಟಿಗೆದ್ದ ಪತಿ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದನ್ನು ಪ್ರಶ್ನಿಸಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದವಾಗಿದೆ. ಇದರಿಂದ ಮನನೊಂದು ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬುಧವಾರ ರಾತ್ರಿ ಘಟನೆ ನಡೆದಿದ್ದು ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ರೀಲ್ಸ್ ಮಾಡಿದ್ದ ಕುಮಾರ್ ಪತ್ನಿ ರೂಪಾ ಆಕೆಯ ಸೋದರ ಮಾವ ಮತ್ತು ಸಹೋದರಿ ಯಶೋಧಾಳನ್ನು ವಶಕ್ಕೆ ಪಡೆದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ