ಮೋದಿ ಕಟೌಟ್ ತಬ್ಬಿಕೊಂಡು ಮಹಿಳೆಯ ಡ್ಯಾನ್ಸ್

Krishnaveni K

ಬುಧವಾರ, 14 ಫೆಬ್ರವರಿ 2024 (13:21 IST)
ನವದೆಹಲಿ: ಪ್ರಧಾನಿ ಮೋದಿಯವರ ಕಟೌಟ್ ತಬ್ಬಿಕೊಂಡು ಮಹಿಳೆಯೊಬ್ಬರು ಅಸಭ್ಯವಾಗಿ ಡ್ಯಾನ್ಸ್ ಮಾಡುವ ರೀಲ್ಸ್ ವೈರಲ್ ಆಗಿದೆ. ಈ ರೀಲ್ಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿಯವರ ಯೋಜನೆಗಳ ಬಗ್ಗೆ ಗಮನ ಸೆಳೆಯಲು ಕೆಲವು ಕಡೆ ಮೋದಿ ಕಟೌಟ್ ಹಾಕಲಾಗಿದೆ. ಮೋದಿಯವರ ಜನಪ್ರಿಯ ಯೋಜನೆಗಳ ಪ್ರಚಾರಕ್ಕಾಗಿ ಇಲ್ಲಿ ಜನರಿಗೆ ಸೆಲ್ಫೀ ತೆಗೆಯಲು ಅವಕಾಶ ನೀಡಲಾಗಿದೆ. ಆದರೆ ಇಂತಹದ್ದೇ ಕಟೌಟ್ ನ್ನು ತಬ್ಬಿಕೊಂಡು ಮಹಿಳೆಯೊಬ್ಬರು ಸೊಂಟ ಕಾಣುವಂತೆ ಸೀರೆ ಉಟ್ಟುಕೊಂಡು ‘ಆಜಾ ಸಜನ್ ಆಜಾ’ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ.

ಮಾಧುರಿ ದೀಕ್ಷಿತ್ ನಾಯಕಿಯಾಗಿರುವ ಖಳನಾಯಕ್ ಚಿತ್ರದ ಹಾಡು ಇದಾಗಿದೆ. ರೀಲ್ಸ್ ಆರಂಭದಲ್ಲೇ ಹಾಡುತ್ತಾ ಮಹಿಳೆ ಮೋದಿಯವರ ಕಟೌಟ್ ತಬ್ಬಿಕೊಳ್ಳುತ್ತಾರೆ. ಬಳಿಕ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಢುತ್ತಾರೆ. ವಿಡಿಯೋದಲ್ಲಿ ಅರೆಬರೆ ಮೈ ಪ್ರದರ್ಶನ ಮಾಡುವ ಮಹಿಳೆಗೆ ನೆಟ್ಟಿಗರು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

ಜನಪ್ರಿಯತೆ ಪಡೆಯಬೇಕೆನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿಯಂತಹ ಘನತೆಯುಳ್ಳ ಹುದ್ದೆಯಲ್ಲಿರುವ ವ್ಯಕ್ತಿಯ ಕಟೌಟ್ ಮುಂದೆ ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ. ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಗೌರವ ಕೊಡಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ