ಹೆಂಡತಿಯ ಆ ಕೃತ್ಯಕ್ಕೆ ಬೇಸತ್ತ ಗಂಡ ಕೊಂದೇ ಬಿಟ್ಟ!

ಗುರುವಾರ, 31 ಜನವರಿ 2019 (21:30 IST)
ಪತ್ನಿ ಹಾಗೂ ಮಗುವನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ  ಪೊಲೀಸರು ಬಂಧಿಸಿದ್ದಾರೆ.

ಎಸ್ ಕೆ ರಾಜು(28) ಬಂಧಿತ ಆರೋಪಿಯಾಗಿದ್ದಾನೆ. ಜ. 20ನೇ ತಾರೀಖಿನಂದು ಪತ್ನಿ ಸುಷ್ಮಾ( 25 ) ಹಾಗೂ ಮೂರು ತಿಂಗಳ ಗಂಡು ಮಗುವನ್ನ ರಾಜು ಕೊಲೆ ಮಾಡಿದ್ದ. ಬಿಡದಿ ಹೋಬಳಿಯ ಹೆಜ್ಜಾಲ- ಮುತ್ತುರಾಯನಪುರ ರಸ್ತೆಯ ಕುಂಬಳಗೂಡು ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ ಮೃತದೇಹಗಳು ಪತ್ತೆಯಾಗಿದ್ದವು. ಹೆಂಡತಿಯ ಅತಿಯಾದ ಫೇಸ್ಬುಕ್ ಮೋಹವೇ ಕೊಲೆಗೆ ಕಾರಣ ಎನ್ನಲಾಗಿದೆ.

ಸುಷ್ಮಾ ಹಾಗೂ ರಾಜುಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿತ್ತು. ನಂತರ ಪರಸ್ಪರ ಪ್ರೀತಿಸಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಮದುವೆಯಾದ ಬಳಿಕವೂ ಸುಷ್ಮಾಳ ಅತಿಯಾದ ಫೇಸ್ಬುಕ್ ಹುಚ್ಚಿಗೆ ಬೇಸತ್ತ ರಾಜು, ನೀಲಗಿರಿ ತೋಪಿನಲ್ಲಿ ಸುಷ್ಮಾಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ. ನಂತರ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಸುಷ್ಮಾ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸದ್ಯ ಆರೋಪಿ ರಾಜು ಹೆಂಡತಿ, ಮಗುವನ್ನು ಕೊಲೆ ಮಾಡಿದ ಬಗ್ಗೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ