ತಂಗಿಯ ತಂಡನ ತೆಕ್ಕೆಗೆ ಜಾರಿದವಳಿಂದ ಗಂಡನ ಕಥೆ ಫಿನಿಷ್

ಭಾನುವಾರ, 18 ಆಗಸ್ಟ್ 2019 (20:27 IST)
ಅಕ್ರಮ ಹಾಗೂ ಅನೈತಿಕ ಸಂಬಂಧ ಕೊನೆಗಾಣೋದು ದುರಂತವಾಗಿಯೇ ಅನ್ನೋದಕ್ಕೆ ಮತ್ತೊಂದು ನಿದರ್ಶನ ದೊರಕಿದೆ.

ಅಕ್ಕ ಆದವಳು ತನ್ನ ಗಂಡನನ್ನ ಮರೆತು ತಂಗಿಯ ಗಂಡನ ಜೊತೆಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು.

ತಂಗಿಯ ಗಂಡನೊಂದಿಗೆ ಲವ್ವಿ ಡವ್ವಿ ನಡೆಸಿದ ಮಹಿಳೆ ಕೊನೆಗೆ ತನ್ನ ಅನೈತಿಕ ಸಂಬಂಧಕ್ಕೆ ಗಂಡ ತೊಂದರೆ ಕೊಡಬಲ್ಲ ಅಂತ ಭಾವಿಸಿ ಹೆಂಡತಿಯೊಬ್ಬಳು ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ.

ಈ ಕೊಲೆಗೆ ಆಕೆಯ ತಂಗಿಯ ಪತಿ, ಸಹೋದರ ಹಾಗೂ ತಂದೆಯೇ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ನೌರಂಗಾಬಾದ್‍ನಲ್ಲಿ ನಡೆದ ಘಟನೆಯಲ್ಲಿ ರಂಜಿತ ಚವ್ಹಾಣ ಕೊಲೆಯಾಗಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರೋ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ