ಪಿರಿಯಡ್ ಸರಿಯಾದ ಸಮಯದಲ್ಲಿ ಆಗಲು ಈ ಮನೆಮದ್ದನ್ನು ಬಳಸಿ

ಭಾನುವಾರ, 18 ಆಗಸ್ಟ್ 2019 (10:07 IST)
ಬೆಂಗಳೂರು : ಸಾಮಾನ್ಯವಾಗಿ ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಈ ಮುಟ್ಟು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಅಂತವರು ಪಿರಿಯಡ್ ಸರಿಯಾದ ಸಮಯದಲ್ಲಿ ಆಗಲು ಈ ಮನೆಮದ್ದನ್ನು ಬಳಸಿ.
1 ಗ್ಲಾಸ್ ನೀರನ್ನು ತೆಗೆದುಕೊಂಡು, ಅದಕ್ಕೆ ಶುಂಠಿಯನ್ನು ಹಾಕಿ ಕುದಿಸಿ. ಅದು 1/2ಗ್ಲಾಸ್  ಆಗುವವರೆಗೂ ಕುದಿಸಿ. ನಂತರ ಅದಕ್ಕೆ 1 ಚಮಚ  ಜೇನುತುಪ್ಪ ಮಿಕ್ಸ್ ಮಾಡಿ ಅದನ್ನು ಪ್ರತಿದಿನ ಕುಡಿಯಿರಿ. ಆದರೆ ಮೂಲವ್ಯಾಧಿ ಸಮಸ್ಯೆ ಇರುವವರು  ಈ ಶುಂಠಿ ಕಷಾಯವನ್ನು ಸ್ವಲ್ಪ ಕುಡಿಯಿರಿ.


ಚಕ್ಕೆ ಯನ್ನು ಪುಡಿ ಮಾಡಿ ಅದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಕುಡಿಯುವ ಹಾಲಿಗೆ ½ ಚಮಚ ಬೇರೆಸಿ ಕುಡಿಯಿರಿ. ಹಾಲು ಕುಡಿಯದವರು ನೀರಿಗೆ ಹಾಕಿ ಕುಡಿಯಿರಿ. ಇದು ಮುಟ್ಟು ಸರಿಯಾದ ಸಮಯಕ್ಕೆ ಆಗುವಂತೆ ಮಾಡುವುದರ ಜೊತೆಗೆ  ಪಿಸಿಓಡಿ ಸಮಸ್ಯೆಗೆ ಉತ್ತಮ ಔಷಧವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ