ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸದಾ ಮಹಿಳೆಯರ ಪರ. ಇಬ್ಬರು ಸಚಿವರಿಗೆ ಸ್ಥಾನ ನೀಡಲು ಸಿದ್ದವಾಗಿದ್ದೇನೆ. ಆದರೆ, ಮಹಿಳಾ ಶಾಸಕರು ಇತರ ಶಾಸಕರ ಮನವೊಲಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕು. ಮಹಿಳೆಯರು ಸಬಲರಾಗಬೇಕು ಎನ್ನುವುದೇ ಸರಕಾರದ ಬಯಕೆಯಾಗಿದೆ. ಆದ್ದರಿಂದ, ಮತ್ತಷ್ಟು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.