ಕೇಶ್ವಾಪೂರ ಮಧುರಾ ಕಾಲೋನಿಯಲ್ಲಿರುವ ಜಗದೀಶ್ ಮನೆ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿಯಮ ಪಾಲನೆ ಮಾಡೋಕೆ ಆಗಿಲ್ಲಾಂದ್ರೆ ರಾಜಿನಾಮೆ ಕೊಡಿ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ ಯಾರು ಕಾನೂನು ಪಾಲನೆ ಮಾಡಲು ಅವರಿಗೆ ಗುಂಡ್ಲಪೇಟೆ ಗತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಮ್ಮಂತಹ ಸಂಘಟನೆಗಳ ಶ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡಲೆಂದೇ ಇವತ್ತು ಹೋರಾಟ ಮಾಡ್ತಿದ್ದೇವೆ. ಧ್ವನಿವರ್ಧಕ ವಿಚಾರದಲ್ಲಿ ಸುಪ್ರಿಂಕೋರ್ಟ್ ಆದೇಶ ನೀಡಿ 15ವರ್ಷಗಳಾಗಿದೆ. ಆದರೆ ಸುಪ್ರೀಂಕೋರ್ಟ್ ಆದೇಶ ಇನ್ನೂ ಜಾರಿಯಾಗ್ತಿಲ್ಲ. ನೀವು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮನೆಗಳ ಮುಂದೆಯೇ ಭಜನೆ ಆರಂಭಿಸುತ್ತೇವೆ ಎಂದರು.