ಮದುವೆ ಮನೆಯಲ್ಲಿ ಪಾಯಸ ಸೇವಿಸಿ 23 ಮಂದಿ ಅಸ್ವಸ್ಥ
ಮದುವೆ ಮನೆಯಲ್ಲಿ ಶಾವಿಗೆ ಪಾಯಸ ಸೇವಿಸಿ 23 ಮಂದಿ ಅಸ್ವಸ್ಥಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸಂಭವಿಸಿದೆ.
ಜಗಳೂರಿನ ಗೌಡಗೊಂಡನಹಳ್ಳಿಯಲ್ಲಿ ಮದುವೆ ಮನೆಯಲ್ಲಿ ನೀಡಲಾಗಿದ್ದ ಪಾಯಸ ಸೇವಿಸಿದ 23 ಮಂದಿಗೆ ವಾಂತಿಭೇದಿ, ಸುಸ್ತು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಆಹಾರ ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಆಸ್ಪತ್ರೆ ಮತ್ತು ಹಾಸ್ಟೆಲ್ ನಲ್ಲಿ ನೀಡಲಾಗಿದ್ದ ಕಳಪೆ ಆಹಾರ ಸೇವಿಸಿ ಮೂರು ತಿಂಗಳಲ್ಲಿ ಅಸ್ವಸ್ಥಗೊಳ್ಳುತ್ತಿರುವ ಮೂರನೇ ಪ್ರಕರಣ ಇದಾಗಿದೆ.