‘ನನಗೆ ಮುಸ್ಲಿಮರ ಮತಗಳು ಬೇಡ’
ಇತ್ತೀಚೆಗೆ ಹಿಂದೂ-ಮುಸ್ಲಿಂ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಕೋಮು ಸಾಮರಸ್ಯವನ್ನು ಕದಡುತ್ತಿದೆ. ಹಿಜಾಬ್, ಹಲಾಲ್, ಮಸೀದಿ, ಧ್ವನಿವರ್ಧಕ ಹೀಗೆ ನಾನಾ ವಿಚಾರಗಳು ಎರಡು ಕೋಮುಗಳ ನಡುವಿನ ಜನರ ಸಂಬಂಧ ಕೆಡಿಸುತ್ತಿವೆ. ಸಾಲದೆಂಬಂತೆ ಈ ವಿಚಾರಗಳ ಬಗ್ಗೆ ರಾಜಕೀಯ ಗಣ್ಯರು ನೀಡುತ್ತಿರುವ ಹೇಳಿಕೆ ಎರಡೂ ಧರ್ಮದ ನಡುವಿನ ಜನರನ್ನು ಮತ್ತಷ್ಟು ದೂರ ಮಾಡುತ್ತಿವೆ. ಸದ್ಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಹಿಂದೂ, ಮುಸ್ಲಿಂ ಜನರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರೀ ಚರ್ಚೆ ಹುಟ್ಟು ಹಾಕಿದೆ. ನನಗೆ ಮುಸ್ಲಿಮರ ಮತಗಳು ಬೇಡ, ಹಿಂದೂಗಳ ಮತಗಳಷ್ಟೇ ಸಾಕು ಎಂದಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಮಾಡುತ್ತೇನೆ. ಆಗ ನನಗೆ ಮುಸ್ಲಿಮರ ಓಟ್ ಬೇಡ ಎಂದು ಧೈರ್ಯವಾಗಿ ಹೇಳುತ್ತೇನೆ. ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು, ಮುಸ್ಲಿಮರ ಮತಗಳು ಬೇಡ ಎಂದು ಹೇಳಿದ್ದಾರೆ.