ಅನ್ನ ಬೆಳೆಯುವ ಜಾಗಕ್ಕೆ ಕನ್ನ ಹಾಕಲು ಬಂದಿರೋ ಬಿಡಿಎ ಅಧಿಕಾರಿಗಳ ವಿರುದ್ದ ಅಕ್ರೋಶ

ಗುರುವಾರ, 10 ಆಗಸ್ಟ್ 2023 (17:32 IST)
ಕೋರ್ಟ್ ಕೇಸ್ ಇದ್ದರೂ ರೈತರ ಜಮೀನು ವಶಕ್ಕೆ ಪಡೆಯಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ.ಇದರ ವಿರುದ್ದ ರೈತರ ಅಕ್ರೋಶ ಹಾಕಿದ್ದಾರೆ.ಅನ್ನ ಬೆಳೆಯುವ ಜಾಗಕ್ಕೆ ಕನ್ನ ಹಾಕಲು ಬಂದಿರೋ ಬಿಡಿಎ ಅಧಿಕಾರಿಗಳ ವಿರುದ್ದ ಅಕ್ರೋಶ ಹಾಕಿರುವ ಘಟನೆ ಬನಶಂಕರಿ ಆರನೇ ಹಂತದ ದಾಸೇ ಗೌಡನ ಪಾಳ್ಯದಲ್ಲಿ ನಡೆದಿದೆ.
 
ಯಾವುದೇ ಸೂಚನೆ ಇಲ್ಲದೇ ಏಕಾಏಕಿ ಜೆಸಿಬಿ ಸಮೇತ ಬಂದ ಬಿಡಿಎ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು,ರೈತರ ವಿರುದ್ದ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ.ಹೀಗಾಗಿ ಬಿಡಿಎ ಅಧಿಕಾರಿಗಳು ಹಾಗೂ ರೈತ ನಡುವೆ ಮಾತಿನ ಚಕಮಕಿ ನಡೆದಿದೆ.ಈ ಹಿನ್ನಲೆ ಪ್ರತಿಭಟನೆ ಗೆ ರೈತರು ಮುಂದಾಗಿದ್ದಾರೆ.ಅನೇಕ ವರ್ಷಗಳಿಂದ ರೈತರ ಸ್ವಾಧೀನದಲ್ಲಿದ್ದ ಜಾಗದ ಏಕಾ ಏಕಿ ದಾಖಲೆ ತಿರುಚುವ ಪ್ರಯತ್ನ ಬಿಡಿಎ ನಡೆಸುತ್ತಿದೆ ಎಂಬ ಆರೋಪ ರೈತರು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ