ಡಿಸಿಎಂ ಕೇಳೋದೇನಿದೆ ನನಗೆ ಕೊಡಲೇಬೇಕು- ಪರಮೇಶ್ವರ್

ಗುರುವಾರ, 18 ಮೇ 2023 (17:09 IST)
ಅಫಿಷಿಯಲ್  ಆಗಿ ಸಂಜೆ ೭ ಕ್ಕೆ‌ ಸಿಎಲ್‌ಪಿ ಸಭೆಯಿದೆ .ಅಬ್ಸರ್ವರ್ ಬಂದು ಪ್ರಕಟಣೆ ಮಾಡ್ತಾರೆ ಅವರಿಗೆ ಮಾಹಿತಿ ಕೊಟ್ಟಿದೆ ಕಳಿಸಿದ್ದಾರೆ.ಅಲ್ಲಿ ಪ್ರೆಸ್ ಮೀಟ್ ಕ್ಯಾನ್ಸಲ್ ಆಗಿದೆ.ಸಿಎಲ್ ಪಿ ನಲ್ಲಿ ಘೋಷಣೆಯಾಗುತ್ತೆ.
 
ದಲಿತ ಸಿಎಂ ಆಗಬೇಕೆಂಬ ವಿಚಾರವಾಗಿ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಅದು ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು,ಯಾವ ರೀತಿ ದಲಿತ ರೆಪ್ರೆಸೆಂಟೇಷನ್  ಸರ್ಕಾರದಲ್ಲಿ ಇರಬೇಕು ಅನ್ನೋದನ್ನ ತೀರ್ಮಾನ ಮಾಡ್ತಾರೆ.ದಲಿತ ,ಲಿಂಗಾಯತ ಸಮುದಾಯ ಮೈನಾರಿಟಿ ಸಮುದಾಯ.ಸ್ಟ್ರಾಂಗ್ ಆಗಿ ಕಾಂಗ್ರೆಸ್ ಪರ ನಿಂತಿದೆ ನಿಂತಿದೆ.ದಲಿತ 51 ಸೀಟ್ ನಲ್ಲಿ 37 ಸೀಟುಗಳನ್ನ ಗೆದ್ದಿದ್ದಾರೆ.ಬೇರೆ ಕ್ಷೇತ್ರದಲ್ಲೂ ಎಫೆಕ್ಟ್ ಆಗಿದೆ.ಈ ಸಮುದಾಯಗಳಿಗೆ ಯಾವ ರೀತಿ ನ್ಯಾಯ ಕೊಡ್ತರೆ ನೋಡಬೇಕು ಅಂತಾ ಜಿ ಪರಮೇಶ್ವರ್ ಹೇಳಿದ್ದಾರೆ.
 
ಇಬ್ಬರ ನಾಯಕರ ಕಿತ್ತಾಟದ ನಡುವೆ ಸೈಲೆಂಟ್ ಆದ್ರಾ ಎಂಬ ವಿಚಾರವಾಗಿ ನಾವೆಲ್ಲಾ ಪಕ್ಷದ ಶಿಸ್ತಿನ ಸಿಪಾಯಿಗಳು,ನಾವು ಲಾಬಿ ಗಲಾಟೆ ಮಾಡೊಲ್ಲಾ ಅವಶ್ಯಕತೆ ಇಲ್ಲ.ಹೈಕಮಾಂಡ್ ವಿಶ್ವಾಸದ ಮೇಲೆ ಇದ್ದೇವೆ.ಅವರಿಗೆ ಅರ್ಥವಾಗಬೇಕು ಯಾವ ಸಮುದಾಯ ಪಕ್ಷದ ಪರ ನಿಂತಿದೆ ಅನ್ನೋದು.ಹೈಕಮಾಂಡ್ ಗಣನೆಗೆ ತೆಗೆದುಕೊಳ್ಳಬೇಕು.ಹೈ ಕಮಾಂಡ್ ಎಲ್ಲರಿಗೂ ನ್ಯಾಯವನ್ನು ಹೈಕಮಾಂಡ್ ಕೊಡ್ತಾರೆ.ರಾಜ್ಯದ ಜನರಿಗೆ ಭರವಸೆಗಳನ್ನ ಕೊಟ್ಟಿದ್ದೇವೆ ಒಳ್ಳೆಯ ಆಢಳಿತ ಕೊಡಬೇಕಿದೆ ಎಂದು ಬಿಜೆಪಿ ಆಡಳಿತ ನೋಡಿದ್ದಾರೆ.ನಾವು ಒಳ್ಳೆ ಆಡಳಿತ ಕೊಡದಿದ್ರೆ ಜನ ತಿರಸ್ಕಾರ ಮಾಡ್ತಾರೆ.ಎಲ್ಲರು ಮನಸ್ಸಲಿ ಇಟ್ಟುಕೊಂಡು ಕೆಲಸ ಮಾಡಬೇಕು ಒನ್ ಸೈಡ್ ಆಗಬಾರದು.ಬಿಜೆಪಿ ಆಡಳಿತ ನೋಡಿದ್ದಾರೆ, ಈಗ ನಮಗೆ ಅಧಿಕಾರ ಕೊಟ್ಟಿದ್ದಾರೆ.ಅಧಿಕಾರದಲ್ಲಿದ್ದೇವೆ ಅನ್ನೋದು ಒನ್ ಸೈಡ್ ಆಗಬಾರದು ಎಂದು ಡಿಸಿಎಂ ಕೇಳೋದೇನಿದೆ ನನಗೆ ಕೊಡಲೇಬೇಕು.ನಾನು ಹಿಂದೆ ಡಿಸಿಎಂ ಇದ್ದೆ ಹಾಗಾಗಿ ನಿರೀಕ್ಷೆ ಮಾಡ್ತಿನಿ.ಏನ್ ತೀರ್ಮಾನ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲಾ.ಸಂಜೆ ಏನ್ ಹೇಳ್ತಾರೆ ನೋಡಬೇಕು,ಅಧಿಕೃತವಾಗಿ ಗೊತ್ತಾಗಬೇಕು ಅಂತಾ ಪರಮೇಶ್ವರ ಹೇಳಿದ್ದಾರೆ.
 
ಒಬ್ಬರೆ ಡಿಸಿಎಂ ಇರಬೇಕೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಆ ರೀತಿ ಹೇಳೊಕೆ ಬರೊಲ್ಲ.ಒಬ್ಬೊಬ್ಬರೆ ಅಧಿಕಾರದಲ್ಲಿ ಇರಬೇಕು ಅಂತಾ ಹೇಳೋದು ಸರಿಯಲ್ಲ.ಎಲ್ಲರು ಪಕ್ಷ ಅಧಿಕಾರಕ್ಕೆ ತರೋದಕ್ಕೆ ಕಾಂಟ್ರಿಬ್ಯುಟ್ ಮಾಡಿದ್ದಾರೆ.ಇಬ್ಬರು ಆಕಾಂಕ್ಷಿಗಳಿದ್ದಾಗ ಚರ್ಚೆಯಾಗಬೇಕು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.ಡಿಕೆಶಿವಕುಮಾರ್ ಒಬ್ಬಂಟಿ ಅಂತಾ ಅವರ ಅಭಿಪ್ರಾಯ ಹೇಳಿದ್ದಾರೆ.ನಾವು ಎಲ್ಲರು ಒಟ್ಟಿಗೆ ಇದ್ದೇವೆ.ಸಿಎಲ್ ಪಿ‌ ಆದಮೇಲೆ ಗೌರ್ನರ್ ಗೆ ಸರ್ಕಾರ ರಚನೆಗೆ  ಅಫಿಸಿಯಲ್ ಆಗಿ ಲೆಟರ್ ಕೊಡ್ತಾರೆ ಅಂತಾ ಜಿ ಪರಮೇಶ್ವರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ