ಖಜಾನೆ ತುಂಬಿಸಲು ಹಿಂದೂ ದೇವಾಲಯಗಳ ಸೇವಾ ಶುಲ್ಕ ಏರಿಕೆ: ನಾವು ಸೇವೆಯೇ ಮಾಡಿಸಲ್ಲ ಎಂದ ಪಬ್ಲಿಕ್

Krishnaveni K

ಶನಿವಾರ, 20 ಸೆಪ್ಟಂಬರ್ 2025 (09:24 IST)
ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶ್ರೀಮಂತ ದೇವಾಲಯಗಳ ಸೇವಾ ಶುಲ್ಕವನ್ನು ಏರಿಕೆ ಮಾಡಲಾಗಿದ್ದು ಇದಕ್ಕೆ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾವು ಯಾರೂ ಸೇವೆಯೇ ಮಾಡಿಸಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.

ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ಹಿಂದೂಗಳ ದೇವಾಲಯಕ್ಕೇ ಕೈ ಹಾಕಿದೆ ಎಂದು ಪಬ್ಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಿಂದೂ ದೇವಾಲಯಗಳ ಮೇಲೂ ಕಣ್ಣು ಬಿತ್ತಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾವು ಯಾರೂ ಇನ್ನು ಶುಲ್ಕ ನೀಡಿ ಮಾಡಿಸುವ ಸೇವೆನಯನ್ನೇ ಮಾಡಿಸಲ್ಲ ಎಂದಿದ್ದಾರೆ.

ಈಗಷ್ಟೇ ಜಾತಿ ಗಣತಿ ವಿಚಾರದಲ್ಲಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಜಾತಿ ಜೊತೆಗೆ ಸೇರಿಸಿಕೊಂಡು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಈಗ ಮತ್ತೆ ಹಿಂದೂ ದೇವಾಲಯಗಳ ಸೇವಾ ಶುಲ್ಕ ಹೆಚ್ಚಿಸಿ ಆಕ್ರೋಶಕ್ಕೆ ಕಾರಣವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ನಾಡಿನ ಪ್ರಮುಖ ದೇವಾಲಯಗಳ ಸೇವಾ ಶುಲ್ಕಗಳಲ್ಲಿ 100 ರೂ.ಗಳಿಂದ 200 ರೂ.ಗಳಷ್ಟು ಹೆಚ್ಚಳವಾಗಿದೆ. ಇದು ಭಕ್ತರಿಗೆ ನಿಜಕ್ಕೂ ಹೊರೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ