ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ

ಬುಧವಾರ, 18 ಡಿಸೆಂಬರ್ 2019 (12:53 IST)
ಮೈಸೂರು : ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.ಮೈಸೂರಿನ ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವರು ತಾವು ಭಾರಿ ಸತ್ಯವಂತರೆಂದು ಮಾತಾಡಿದ್ದಾರೆ. ನಾನು ಹಣ ಪಡೆದಿದ್ದೇನೆಂದು ಅಪಪ್ರಚಾರ ಮಾಡಿದರು. ಆದರೆ ನಾನು ತಿಂದವನಲ್ಲ, ತಿನ್ನಿಸಿದವನು. ನಾನು ಯಾರ ಅನ್ನಕ್ಕೂ, ಕೈ ಹಾಕಿದವನಲ್ಲ ಎಂದು ತಮ್ಮ ಬಗ್ಗೆ ಅಪವಾದ ಹೊರಿಸಿದವರ ಮೇಲೆ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ