ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ : ಕುಮಾರಸ್ವಾಮಿ

ಗುರುವಾರ, 6 ಏಪ್ರಿಲ್ 2023 (09:36 IST)
ಬೆಂಗಳೂರು : ನಟ ಸುದೀಪ್ ಅವರು ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಅಂತಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
 
ನಟ ಸುದೀಪ್ ಬೆಂಬಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. 

ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಈ ರೀತಿ ಮಾಡಿಯೇ ಚುನಾವಣೆಯಲ್ಲಿ ಮತ ಪಡೆಯೋಕೆ ಮುಂದಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ಶಿಳ್ಳೆ ಹೊಡೆಯುತ್ತಾರೆ.

ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ ಹೋಗ್ತಾರೆ. ಬೇರೆ ಬೇರೆ ಕಡೆ ಹೋಗ್ತಾರೆ. ನಟರಲ್ಲಿ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯ, ಸ್ನೇಹದ ಮೇಲೆ ಹೋಗ್ತಾರೆ. ಆದ್ರೆ ಜನ ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ