ಬಿಎಸ್‌ವೈ ಸಿಎಂ ಮಾಡಿದ್ರೆ 100 ಕೋಟಿ ವೆಚ್ಚದ ಬಿದಿರು ಸಂಸ್ಕರಣ ಘಟಕ: ಅಮಿತ್ ಶಾ

ಶುಕ್ರವಾರ, 30 ಮಾರ್ಚ್ 2018 (19:32 IST)
ಚಾಮರಾಜನಗರ: ಸಂವಿಧಾನ ಬಂದಾಗಿನಿಂದ ಪರಿವಾರ ತಳವಾರ ಸಮುದಾಯ ಎಸ್ಟಿ ವ್ಯಾಪ್ತಿಗೆ ಬಂದಿರಲಿಲ್ಲ. ಅದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯಡಿಯೂರಪ್ಪ ಅವರನ್ನು ರಾಜ್ಯದ ಸಿಎಂ ಮಾಡಿದ್ರೆ ನೂರು ಕೋಟಿ ರೂ ವೆಚ್ಚದಲ್ಲಿ ಬಿದಿರು ಸಂಸ್ಕರಣ ಘಟಕ ನಿರ್ಮಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಸಾ ಮತ್ತೊಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಸರ್ಕಾರ ರಾಜ್ಯದ ಹರಿಜನ, ಗಿರಿಜನ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ ಮೋದಿ ತಂದ ಬಿಲ್ಲನ್ನು ಸೋನಿಯಾಗೆ ಹೇಳಿ ರಾಜ್ಯ ಸಭೆಯಲ್ಲಿ ತಡೆ ಹಿಡಿಸಿದ್ರು ಎಂದು ಆರೋಪಿಸಿದರು.
 
ನಮ್ಮ ಚಿತ್ರದುರ್ಗದ ಮದಕರಿ ನಾಯಕ ಹೈದರಾಲಿ ಜೊತೆ ಹೋರಾಡಿ ವೀರಮರಣ ಹೊಂದುತ್ತಾರೆ. ಆದ್ರೆ ಅವರ ಜಯಂತಿ ಆಚರಿಸುವ ಬದಲು, ಹೈದರಾಲಿ ಮಗ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
 
ಸಿದ್ದರಾಮಯ್ಯ ಆಡಳಿತ ಕೊನೆಯಾಗ್ತಿದೆ. ಯಡಿಯೂರಪ್ಪ ಸರ್ಕಾರ ಬಂದಾಗ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ವೀರಮದಕರಿಯ ಭವ್ಯ ಸ್ಮಾರಕ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
 
ಸಿದ್ದರಾಮಯ್ಯ ಅವರಿಗೆ ಇಲ್ಲಿಂದ ಸವಾಲು ಹಾಕ್ತಿದೀನಿ... ಎಸ್ಸಿ-ಎಸ್ಟಿ ಮಕ್ಕಳ ಸ್ಕಾಲರ್ ಶಿಪ್ ಗೆ ಇಟ್ಟಿರೋದು ಕೇವಲ 123 ಕೋಟಿ ಮಾತ್ರ. ಆದ್ರೆ ಅಲ್ಪಸಂಖ್ಯಾತ ಮಕ್ಕಳಿಗೆ 513 ಕೋಟಿ ಇಟ್ಟಿರುವುದು ಮೋಸವೋ ಅಲ್ಲವೋ? ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ