ಒಂದು ವೇಳೆ ಸಾವಾದ್ರೇ ಬಿಜೆಪಿ ಸರ್ಕಾರವೇ ನೇರ ಹೊಣೆ- ಚಂದ್ರಶೇಖರ್

ಬುಧವಾರ, 22 ಮಾರ್ಚ್ 2023 (13:19 IST)
24 ರಿಂದ ಸಾರಿಗೆ ಮುಷ್ಕರ ಹಿನ್ನಲೆ ಪ್ರತಿಭಟನೆಯ ಪೂರ್ವಭಾವಿಯಾಗಿ ಅಧ್ಯಕ್ಷ ಚಂದ್ರಶೇಖರ್ ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.ಶಾಂತಿನಗರದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಮುಂದೆ  ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
 
ಕೆಲ ಸಾರಿಗೆ ನೌಕರರ ಸಂಘಟನೆಗಳು ಕೇವಲ 15% ವೇತನಕ್ಕೆ ಒಪ್ಪಿಕೊಂಡು ಮುಷ್ಕರದ ದಾರಿ ತಪ್ಪಿಸಿದ್ದಾರೆ.ಸಾರಿಗೆ ನೌಕರರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಕರೆದು ಧಮ್ಕಿ ಹಾಕಿದ್ದಾರೆ.ಮುಷ್ಕರ ವಾಪಾಸ್ ತೆಗೆದುಕೊಳ್ಳಲು ಅನಂತ್ ಸುಬ್ಬರಾವ್ ಯಾರು...?ಅನಂತ್ ಸುಬ್ಬರಾವ್ ಅವರಿಗೂ ಸಾರಿಗೆ ನೌಕರರಿಗೂ ಏನು ಸಂಬಂಧ..ಅವರು ಯಾವುದೇ ಚುನಾವಣೆ ಮೂಲಕ ಆಯ್ಕೆಯಾದ ನಾಯಕ ಅಲ್ಲ.ನಾವು 24ರಂದು ಮುಷ್ಕರ ಮಾಡುವುದಾಗಿ ಹೇಳಿದ ನಂತರ ಅವರು ಮುಷ್ಕರ ಮಾಡುವುದಾಗಿ ಹೇಳಿದ್ರು.ನಮ್ಮ ನ್ಯಾಯಯುತ ಮುಷ್ಕರವನ್ನು ವಿಫಲ ಮಾಡಲು ಅವರು ಫಿತೂರಿ ಮಾಡಿದ್ರು.ನಾವು 24ರಂದು ಕರೆ ನೀಡಿರುವ ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ.ನಮ್ಮ ಬೇಡಿಕೆ ಈಡೇರುವವರೆಗೆ ಈ ಜಾಗ ಬಿಟ್ಟು ಕದಲಲ್ಲ.ಒಂದು ವೇಳೆ ಸಾವಾದ್ರೇ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು KSRTC ಕೇಂದ್ರ ಕಚೇರಿ ಆವರಣದಲ್ಲಿ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ