ಬಾಕಿ ಹಣ ಬಿಡುಗಡೆ ಮಾಡಲಿಲ್ಲ ಅಂದರೆ ಮುಖ್ಯ ಮಂತ್ರಿ ಮನೆಗೆ ಮುತ್ತಿಗೆ ಹಾಕ್ತೇವೆ- ಕೆಂಪಣ್ಣ

ಮಂಗಳವಾರ, 14 ಮಾರ್ಚ್ 2023 (14:53 IST)
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಸಂದಾಯವಾಗಬೇಕಿದ್ದ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಒತ್ತಾಯ ಮಾಡಿದ್ದಾರೆ. 
 
ವಿವಿಧ ಇಲಾಖೆಗಳಿಂದ 22 ಸಾವಿರ ಕೋಟಿ ಗುತ್ತಿಗೆದಾರರಿಗೆ ಬಾಕಿ ಇದೆ.ಗುತ್ತಿಗೆದಾರರಿಗೆ ಬಾಕಿ ಹಣ ಉಳಿಸಿಕೊಂಡಿದ್ದಾರೆ .ಕೆಲವರಿಗೆ ಬಿಡುಗಡೆ ಮಾಡಿದ್ದಾರೆ, ಇನ್ನೂ ಕೆಲವರಿಗೆ ಬಿಡುಗಡೆ ಮಾಡಿಲ್ಲ.ಪಿಡಬ್ಲ್ಯೂಡಿ, ನೀರಾವರಿ, ಬಿಬಿಎಂಪಿ ಸೇರಿದಂತೆ  ಹಲವು ಇಲಾಖೆಯಲ್ಲಿ ಬಾಕಿ ಇದೆ .ಅವರಿಗೆ ಬೇಕಾದವರಿಗೆ ಬಿಡುಗಡೆ ಮಾಡ್ತಾ ಇದ್ದಾರೆ .ಹುಬ್ಬಳ್ಳಿ, ಧಾರಾವಾಡದಲ್ಲಿ ಚೀಫ್ ಇಂಜಿನಿಯರ್ ಬೇಕಾದವರಿಗೆ ಮಾರಾಟ ಮಾಡ್ತಾ ಇದ್ದಾರೆ.
 
 ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷ ಕಳೆದರು ಹಣ ಬಿಡುಗಡೆಯಾಗುತ್ತಿಲ್ಲ.ವಿವಿಧ ಇಲಾಖೆಗಳಿಂದ 22 ಸಾವಿರ ಕೋಟಿ ಹಣ ಬಾಕಿ ಇದೆ.ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ ಯಲ್ಲಿ ಅತಿ ಹೆಚ್ಚು ಕಾಮಗಾರಿ ಗಳು ನಡೆದಿವೆ.ಅಧಿಕಾರಿ ಮತ್ತು ರಾಜಕಾರಣಿಗಳು 7 % ಕೊಟ್ರೆ ಬಿಲ್ ಬರೀತಾರೆ.ಬೇರೆ ಜಿಲ್ಲೆಗಳಲ್ಲಿ 10/% ಕೊಟ್ರೆ ಬಿಲ್ ಮಾಡ್ತಾರೆ .ಅದ್ರಿಂದ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಬೇಕಾದವರಿಗೆ ಮಾತ್ರ ಬಿಲ್ ಮಾಡ್ತಾರೆ.ಇದ್ರಿಂದ ಕಾಲ ಮಿತಿಯೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡಿ ಅಂತ ಕೆಂಪಣ್ಣ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ