ಹಣ ಕೊಡಿದಿದ್ರೆ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ-ಈಶ್ವರಪ್ಪ

ಶುಕ್ರವಾರ, 3 ನವೆಂಬರ್ 2023 (15:00 IST)
ನಮ್ಮಪ್ಪನ್ನ ಬೀದಿಲ್ಲಿ ಕಾಲಿಗೆ ಬಿದ್ದು, ಮನೆಗೆ ಬಂದಾಗ ಒದೆಯೋದಾ.?ನರೇಂದ್ರ ಮೋದಿ ವಿಶ್ವನಾಯಕ.ಸಿದ್ದರಾಮಯ್ಯ ಏಕ ವಚನದಲ್ಲಿ ಬೈತಾರೆ.ನನಗೆ ಸಿದ್ದರಾಮಯ್ಯ ಬಗ್ಗೆ ಏಕ ವಚನದಲ್ಲಿ ಕರೆಯೋಕೆ ಬರಲ್ವಾ.?ಅದಕ್ಕೆ ಹೇಗೆ ಉತ್ತರ ಕೊಡಬೇಕು ಕೊಡ್ತೀನಿ.ನಾವು ಬರ ಅಧ್ಯಯನ ಮಾಡಲು ಹೋಗ್ತೀವಿ.ಅಧ್ಯಯನ ಮಾಡಿ ಸರ್ಕಾರಕ್ಕೆ ಕೊಡ್ತೀವಿ.

ಹಣ ಕೊಡಿದಿದ್ರೆ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
 
ಇನ್ನೂ ಕೇಂದ್ರದತ್ತ ಬೊಟ್ಟು ಮಾಡ್ತಿರುವ ವಿಚಾರವಾಗಿ ಬರ ಎಲ್ಲಿ ಬಂದಿರೋದು.?ಮೊದಲು ಹಣ ಯಾರು ಬಿಡುಗಡೆ ಮಾಡಬೇಕು.ಇವರು ಹೇಳಲಿ ನಮ್ಮ ಬಳಿ ಹಣ ಇಲ್ಲ, ಗ್ಯಾರಂಟಿಗಾಗಿ ನಾಶ ಮಾಡಿದ್ದೇವೆ ಅಂತ ಹೇಳಿ.

ಸಿದ್ದರಾಮಯ್ಯ ಇರೋವರೆಗೂ ಅವರಿಗೆ ಬೆಂಬಲ, ಬಳಿಕ ಪರಮೇಶ್ವರ್ ಗೆ ಬೆಂಬಲ ಎಂದ ಸಚಿವ ರಾಜಣ್ಣ ಹೇಳಿಕೆ‌ ವಿಚಾರಕ್ಕೆ ಹೈಕಮಾಂಡ್ ಸತ್ತೋಯ್ತಾ.?ರಾಜಣ್ಣಾನೇ ಹೇಳಿದ್ದು ಸಿದ್ದರಾಮಯ್ಯ ಸಿಎಂ ಅಂತ.ಸಿದ್ದರಾಮಯ್ಯ ರಾಜಣ್ಣನ ಹೇಳಿಕೇನ ಒಪ್ತಾರಾ.? ಅಂತಾ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ