ದಂಪತಿಗೆ ಮದುವೆಯಾಗಿ 10 ವರ್ಷಗಳೇ ಕಳೆದಿವೆ. ಒಬ್ಬಳು ಪುತ್ರಿಯೂ ಇದ್ದಾಳೆ. ಆದರೆ ಇತ್ತೀಚೆಗೆ ಹಲವು ದಿನಗಳಿಂದ ಗಂಡ-ಹೆಂಡತಿ ಮಧ್ಯೆ ಇನ್ನಿಲ್ಲದ ಜಗಳ ಶುರುವಾಗಿತ್ತು. ಸಣ್ಣಸಣ್ಣದಕ್ಕೂ ಕೋಪ-ಗಲಾಟೆ ಮನೆಯಲ್ಲಿ ಸಾಮಾನ್ಯವಾಗಿತ್ತು. ಹಾಗೇ ಸೆಪ್ಟೆಂಬರ್ 11ರಂದೂ ಕೂಡ ಪತಿ-ಪತ್ನಿ ಜಗಳವಾಡಿದ್ದಾರೆ. ಆಕೆ ತನ್ನ ಗಂಡನೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಮಗಳಿಗೂ ಹೇಳದೆ ಮನೆಯಿಂದ ಹೊರಹೋಗಿದ್ದಳು. ಅವಳು ಮನೆಯಿಂದ ಹೊರಹೋಗಿ ಎಷ್ಟೇ ಹೊತ್ತಾದರೂ ಮನೆಗೆ ವಾಪಸ್ ಬಾರದಾಗ ಆಕೆಯ ಪುತ್ರಿ ಮತ್ತು ಗಂಡ ಆತಂಕದಿಂದ ಸುತ್ತಲೂ ಎಲ್ಲ ಕಡೆ ಹುಡುಕಿದ್ದಾರೆ. ಹೀಗೆ ಹುಡುಕುತ್ತ ಹೋದ ಪತಿಗೆ ತನ್ನ ಹೆಂಡತಿ ಇನ್ನೊಬ್ಬನೊಂದಿಗೆ ಆಗ್ರಾದ ಕೈಲಾಶ್ ಮಂದಿರ್ ರಸ್ತೆಯಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿರುವುದು ಕಣ್ಣಿಗೆ ಬಿದ್ದಿದೆ.