ಅಕ್ರಮ ಬೀಟರ ಮರ‌ ಸಾಗಾಟ: 7 ಲಕ್ಷ ರೂ.ಮೌಲ್ಯದ‌ ಮಾಲು ವಶ

ಮಂಗಳವಾರ, 15 ಫೆಬ್ರವರಿ 2022 (20:28 IST)
ಗೋಣಿಕೊಪ್ಪ:- ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ತಿತಿಮತಿ ಅರಣ್ಯ ಇಲಾಖಾ ಸಿಬ್ಬಂದಿ ಯಶಸ್ವಿಯಾಗಿದ್ದು, ಅಂದಾಜು 7 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ ರಾತ್ರಿ ತಿತಿಮತಿ ಪಾಲಿಬೆಟ್ಟ ರಸ್ತೆಯಲ್ಲಿ KL 11 V 1708 ವಾಹನದಲ್ಲಿ ಕಾಫಿ ಹೊಟ್ಟು ಮಧ್ಯದಲ್ಲಿ ಬೀಟೆ ಮರದ ಅಂದಾಜು ಐದು ಲಕ್ಷ ಮೌಲ್ಯದ 17 ನಾಟಾಗಳನ್ನು ಸಾಗಿಸುವ ಸಂದರ್ಭ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಅರಣ್ಯ ಉತ್ಪನ್ನ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆಸಿದ ಸಂದರ್ಭ ವಾಹನ ಚಾಲಕ ಪರಾರಿಯಾಗಿದ್ದು ಮತ್ತೋರ್ವ ಆರೋಪಿ ಶಿಯಾಬ್ ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಉಪವಿಭಾಗದ ಡಿಸಿಎಫ್ ಚಕ್ರಪಾಣಿ, ತಿತಿಮತಿ ಉಪ ವಿಭಾಗದ ಎಸಿಎಫ್ ಉತ್ತಯ್ಯ ಅವರ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಹಾಲೇಶ್, ಉಮಾಶಂಕರ್ ಹಾಗೂ ಸಿಬ್ಬಂದಿಗಳಾದ ರಮೇಶ್ ಮತ್ತು ಗಗನ್ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ