ನಿಷ್ಪಕ್ಷಪಾತವಾಗಿ ತನಿಖೆಯಾಗಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ- ಸಿಎಂ

ಶುಕ್ರವಾರ, 3 ಮಾರ್ಚ್ 2023 (14:48 IST)
ಮಾಡಾಳು ಪುತ್ರನ ಮೇಲೆ ಲೋಕಾಯುಕ್ತ ರೇಡ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದಾರೆ.
 
ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನ ಮುಕ್ತವಾಗಿ ನಿಗ್ರಹಿಸಬೇಕು ಅಂತ ಈ ಲೋಕಾಯುಕ್ತ ಇಲ್ಲದಿದ್ದರೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿದೆ.ನಾವು ನಿಷ್ಪಕ್ಷಪಾತವಾಗಿ ತೆನಿಖೆ ಮಾಡ್ತೀವಿ ಅಂತ ಪದೇ ಪದೇ ಹೇಳುತ್ತಿದ್ದೇವೆ.ಈ ವಿಚಾರದಲ್ಲಿಯೂ ಸಹ ಲೋಕಾಯುಕ್ತ ಸರ್ವ ಸ್ವತಂತ್ರವಾಗಿರುವ ಸಂಸ್ಥೆ.ನಿಷ್ಪಕ್ಷಪಾತವಾಗಿ ತನಿಖೆಯಾಗಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ.ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.
 
ಏನ್ ಏನ್ ಮಾಹಿತಿ ಸಿಕ್ಕಿದೆ ಹಣ ಸಿಕ್ಕಿದೆ ಲೋಕಾಯುಕ್ತ ಬಳಿ ಇದೆ.ನಿಷ್ಪಕ್ಷಪಾತವಾದ ತೆನಿಖೆ ಆಗಲಿ.ಯಾರಿಗೆ ಸೇರಿದ್ದು ಹಣ ಯಾರಿಗೋಸ್ಕರ ಆಗಿದ್ದು ಹೊರಬರಲಿ.ಸತ್ಯ ಹೊರಗಡೆ ಬರಲಿ ಅನ್ನೋದು ನಮ್ಮ ಉದ್ದೇಶ.ಯಾರು ತಪ್ಪು ಮಾಡ್ತಾರೆ ಅವರು ಶಿಕ್ಷೆ ಅನುಭಿಸುತ್ತಾರೆ.ಕಾಂಗ್ರೆಸ್ ಶಾಸಕರ ಮೇಲೆ ಹಲವಾರು ಆರೋಪವಿತ್ತು.ಅವರ ಮಂತ್ರಿಗಳ ಮೇಲೆ ಇತ್ತು.ಎಸಿಬಿ ಇದದ್ದಕ್ಕೆ ಅವರು ಕೇಸ್  ಮುಚ್ಚಿಹಾಕಿದ್ರು.ಈಗ ಲೋಕಾಯುಕ್ತ ತೆನಿಖೆಯಾದಗ ಅವರದ್ದು ಸಹ ಹೊರಗಡೆ ಬರುತ್ತೆ.ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿಹಾಕಿರೋದಕ್ಕೆ ಇದೇ ಸಾಕ್ಷಿ.ಇವೆಲ್ಲ ಬಹಿರಂಗವಾಗುತ್ತೆ.
ಲೋಕಾಯುಕ್ತ ನಾಲ್ಕೈದು ವರ್ಷ ಮುಚ್ಚಿಹಾಕಿದ್ರಲ್ಲ.ಅದ್ರಿಂದ ನಮ್ಗೆ ಯಾವುದೇ ಮುಚ್ಚಿಡುವ ಪ್ರಶ್ನೆಯೇ ಇಲ್ಲ.ಬಹಳ ಸ್ಪಷ್ಟವಾಗಿ ಜಾರ್ಜ್ ಅವರು ವಿಧಾನಸಭೆಯಲ್ಲಿ ಹೇಳ್ತಾರೆ, ಎಸಿಬಿನೇ ಮುಂದುವರಿಸಿ ಅಂತ ಅವರು ಯಾರ ಪರವಾಗಿದ್ದಾರೆ..?ಈಗ ಈ ಘಟನೆ ಇಟ್ಟುಕೊಂಡು ತಾವು ದೊಡ್ಡ ಸ್ವಚ್ಛ ಪಕ್ಷ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ.ಅವರು ಬಹಳಹಿಂದೆಯೂ ಭ್ರಷ್ಟಾಚಾರ ಮಾಡಿದ್ದಾರೆ, ಹಲವಾರು ಜನರ ಮೇಲೆ ಕೇಸ್ ಸಹ ಆಗಿದೆ, ತನಿಖೆ ಸಹ ಆಗ್ತಿದೆ.ಅವರು ಏನು ಮುಚ್ಚಿ ಹಾಕಿದ್ರೋ ಅವೆಲ್ಲ ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸ್ತೀನಿ ಎಂದು ಸಿ ಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ