ಇಂದು ನನ್ನ ಪಾಲಿನ ಸಾರ್ಥಕವಾದ ದಿನ-ಮಾಜಿ ಸಿಎಂ B.S. ಯಡಿಯೂರಪ್ಪ
ಏರ್‌ಪೋರ್ಟ್ ಉದ್ಘಾಟನಾ ಸಮಾವೇಶದಲ್ಲಿ ಮಾಜಿ ಸಿಎಂ B.S. ಯಡಿಯೂರಪ್ಪ ಮಾತನಾಡಿದ್ದು, ಏರ್‌ಪೋರ್ಟ್ ಉದ್ಘಾಟಿಸಿರೋದು ಸಂತಸ ತಂದಿದೆ ಎಂದು ಮಾತು ಆರಂಭಿಸಿದ್ರು..ಇಡೀ ವಿಶ್ವವೇ ಮೆಚ್ಚುವಂತ ಆದರ್ಶ ನಾಯಕ ಪ್ರಧಾನಿ ಮೋದಿ. ಅವರು ನನ್ನ ಹುಟ್ಟುಹಬ್ಬದ ದಿನವೇ ಏರ್‌ಪೋರ್ಟ್ ಉದ್ಘಾಟನೆ ಆಗಬೇಕು ಎಂದಿದ್ರು. ಶಿವಮೊಗ್ಗಕ್ಕೆ ಬಂದೇ ಬರುತ್ತೇನೆ ಎಂದು ಮೋದಿ ಹೇಳಿದ್ರು. ಅದು ಇಂದು ಸಾಕಾರಗೊಂಡಿದೆ ಎಂದು BSY ಸಂತಸ ವ್ಯಕ್ತಪಡಿಸಿದ್ರು.. ಶಿವಮೊಗ್ಗದಲ್ಲಿ ಅಭಿವೃದ್ಧಿ ಮತ್ತಷ್ಟು ಎತ್ತರಕ್ಕೆ ತಲುಪಲಿದೆ. ನನ್ನ ರಾಜಕೀಯ ಜೀವನದಲ್ಲಿ ಈ ದಿನ ವಿಶೇಷ ದಿನವಾಗಿದೆ. ಇಂದು ನನ್ನ ಪಾಲಿನ ಸಾರ್ಥಕವಾದ ದಿನ. ಇದು ಕೇವಲ ಏರ್‌ಪೋರ್ಟ್ ಅಲ್ಲ. ಮಲೆನಾಡಿಗರ ಕನಸು ನನಸಾಗುವ ಸಮಯ ಎಂದು ಖುಷಿ ವ್ಯಕ್ತಪಡಿಸಿದ್ರು.