ಅನ್ನಭಾಗ್ಯ ಯೋಜನೆಗೆ ವಿಳಂಬವಾಗುವ ಸಾಧ್ಯತೆಯಿದೆ.ಅಕ್ಕಿ ಪೂರೈಕೆ ಕೊರತೆಯಿಂದಾಗಿ ಜುಲೈ ೧ ರಿಂದಲೇ ಯೋಜನೆ ಜಾರಿಯಾಗುವುದು ಕಷ್ಟವಾಗಿದೆ..ಕೇಂದ್ರ ಸರ್ಕಾರ ಕೈಕೊಟ್ಟ ಮೇಲೆ ಅಕ್ಕಿ ಖರೀದಿಗೆ ನೆರೆ ರಾಜ್ಯಗಳ ಮೊರೆ ಹೋಗಲಾಗಿದೆ..ಆದ್ರೆ ನೆರೆ ರಾಜ್ಯಗಳಿಂದ ಇನ್ನೂ ಅಕ್ಕಿ ಕೊಡುವ ಬಗ್ಗೆ ಸ್ಪಷ್ಟನೆ ಸಿಗ್ತಿಲ್ಲ..ತೆಲಂಗಾಣ ಅಕ್ಕಿ ದಾಸ್ತಾನಿಲ್ಲ ಅಂತ ಕೈಕೊಟ್ಟಿದೆ..ಆಂಧ್ರ ಇಂದು ನಾಳೆ ಅಂತ ವಿಳಂಬಮಾಡ್ತಿದೆ..ಛತ್ತೀಸ್ ಘಡ ೧.೫ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋಕೆ ರೆಡಿಯಾದ್ರೂ ಅಲ್ಲಿಂದ ತರೋಕೆ ಖರ್ಚು ಹೆಚ್ಚಾಗಲಿದೆ..ಪಂಜಾಬ್ ಕೂಡ ಅಕ್ಕಿ ನೀಡುವ ಘೋಷಣೆ ಮಾಡಿದೆ.ಅಲ್ಲಿಂದಲೂ ತರುವುದಕ್ಕೆ ಟ್ರಾನ್ಸ್ ಪೋರ್ಟ್ ಖರ್ಚು ಸರ್ಕಾರಕ್ಕೆ ಹೊರೆಯಾಗಲಿದೆ..ಹೀಗಾಗಿ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ.