ಸರ್ಕಾರದ ಶಕ್ತಿ ಯೋಜನೆಯಿಂದ ವೋಲ್ವೋ ಬಸ್ಗಳಿಲ್ಲ ಎಫೆಕ್ಟ್

ಸೋಮವಾರ, 19 ಜೂನ್ 2023 (16:41 IST)
ಕಳೆದ ಒಂದು ವಾರದಲ್ಲಿ ವೋಲ್ವೋ, ವಜ್ರ ಬಸ್ ಗಳ ಪ್ರಯಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಪ್ರೀಮಿಯಂ ಬಸ್ ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಭಾಗ್ಯ.ಆದ್ರೆ ವೋಲ್ವೋ ಬಸ್ ಗಳಲ್ಲಿ ಮಹಿಳೆಯರು ಹಣ ಕೊಟ್ಟೆ ಓಡಾಟ ಮಾಡಬೇಕು.ಶಕ್ತಿ ಯೋಜನೆ ಜಾರಿಯಾದ್ಮೇಲೆ ವೋಲ್ವೋದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ನುಗಮ ವ್ಯಕ್ತಪಡಿಸಿದೆ.ಆದ್ರೆ ಬಿಎಂಟಿಸಿಗೆ ಬೊಕ್ಕಸ ಶಕ್ತಿ ಯೋಜನೆ ತುಂಬಿದೆ.ಶಕ್ತಿ ಯೋಜನೆ ಜಾರಿಯಾದ್ರೂ ಐಷಾರಾಮಿ ಬಸ್ ಗಳನ್ನ  ಮಹಿಳಾ ಮಣಿಗಳು ‌ಬಿಟ್ಟಿಲ್ಲ.ಶಕ್ತಿ ಯೋಜನೆ ಬಳಿಕ ವೋಲ್ವೋದಲ್ಲಿ ಮಹಿಳಾ ಪ್ರಯಾಣಿಕ ಸಂಖ್ಯೆ ಹೆಚ್ಚಳವಾಗಿದೆ.ನಿತ್ಯ 5 ರಿಂದ 6 ಸಾವಿರ ಪ್ರಯಾಣಿಕರ ಸಂಖ್ಯೆ  ಹೆಚ್ಚಳವಾಗಿದ್ದಾರೆ.
 
ನಿತ್ಯ ಕಾಡುಗೋಡಿ ವೈಟ್ ಫೀಲ್ಡ್, ಏರ್ಪೋರ್ಟ್,ಬನ್ನೇರುಘಟ್ಟ ಸೇರಿ ಹಲವೆಡೆ 470 ವೋಲ್ವೋ ಬಸ್ ಗಳು ಓಡಾಟ ನಡರಸ್ತಿದ್ದು,ಈ ಮೊದಲು ನಿತ್ಯ ವೋಲ್ಟೋ ಬಸ್ ಗಳಲ್ಲಿ 1.70 ಲಕ್ಷದಿಂದ 1.75 ಲಕ್ಷದವರಿಗೂ ವರಿಗೂ ಪ್ರಯಾಣಿಕರು ಒಡಾಟ ನಡರಸ್ತಿದ್ರು.ಆದ್ರೆ ಕಳೆದ ಒಂದು ವಾರದಲ್ಲಿ 1.80 ಲಕ್ಷವರಿಗೂ ಪ್ರಯಾಣಿಕರು ಓಡಾಟ ನಡರಸಿದ್ದಾರೆ.ಆದ್ರೆ ಕಳೆದ ವಾರದಿಂದ ವೋಲ್ವೋ ಬಸ್ ಗಳಿಂದ 2.5 ರಿಂದ 3  ಲಕ್ಷದವರಿಗೂ ಹೆಚ್ಚವರಿ ಕಾರ್ಯಾಚರಣೆ ಆದಾಯವಾಗಿದೆ.ಈ ಮೊದಲ ನಿತ್ಯ ವೋಲ್ವೋ ಕಾರ್ಯಾಚರಣೆ ಅದಾಯ 67 ರಿಂದ 70 ಲಕ್ಷ ಬರುತ್ತಿತ್ತು.ಆದ್ರೆ ಇದೀಗ ನಿತ್ಯ 70 ರಿಂದ 73 ಲಕ್ಷ ಆದಾಯ ಸಂಗ್ರಹವಾಗಿದೆ.ಬಿಎಂಟಿಸಿ ಆದಾಯ ಹಾಗೂ ಪ್ರಯಾಣಿಕರನ್ನ  ಹೆಚ್ಚಿಸಿದೆ.ಕಳೆದ ಹಲವು ವರ್ಷಗಳಿಂದ ಬಿಎಂಟಿಸಿ ಬಸ್ ಗಳು ವೋಲ್ಬೋ ಬಸ್ ಗಳಿಗೆ ಹೊರೆಯಾಗಿದೆ.ಹೊರೆ ಇಳಿಸಲು ಹಲವು ಭಾರೀ ಟಿಕೆಟ್ ದರ ಬಿಎಂಟಿಸಿ ಇಳಿಸಿದೆ.ಆದ್ರೆ ಶಕ್ತಿ ಯೋಜನೆ ಜಾರಿಯಾದ್ಮೇಲೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
 
 
ವೋಲ್ವೋದಲ್ಲಿ ಪ್ರಯಾಣಿಕರು ಹೆಚ್ಚಳವಾಗಲು ಬಿಎಂಟಿಸಿ ನೀಡ್ತಿರೋ ಕಾರಣಗಳೇನು-?
 
-ವೋಲ್ವೋ ಸಂಚಾರ ಸಾಕಷ್ಟು ಪ್ರಯಾಣಿಕರಿಗೆ ಪ್ರಸ್ಟೀಜ್ ವಿಷ್ಯ..
-ಪ್ರೀಮಿಯಂ ಬಸ್ ಕ್ಕಿಂತ ವೋಲ್ವೋ  ಪ್ರಯಾಣ ಸುಖಕರವಾಗಿರುತ್ತೆ..
-ಬಿಸಿಲಿನಲ್ಲಿ ಪ್ರೀಮಿಯಂ ಬಸ್ ಗಳಲ್ಲಿ ಓಡಾಟ ಕಷ್ಟ
-ಹೀಗಾಗಿ ಎಸಿ ಇರೋ ಕಾರಣ ವೋಲ್ವೋ ಕಡೆ ಒಲವು
- ಪ್ರೀಮಿಯಂ ಬಸ್ ಗಳಲ್ಲಿ ಮಹಿಳೆಯರಿಂದ ಹೆಚ್ಚು ರಶ್ - ವೋಲ್ವೋ ಆರಾಮದಾಯಕ ವಾಗಿ ಓಡಾಟ ಮಾಡಬಹುದು.
-ವೋಲ್ವೋ ಪ್ರೀಮಿಯಂ ಬಸ್ ಗಳಂತೆ ಎಲ್ಲಾ ಕಡೆ ಸ್ಟಾಫ್ ಕೊಟ್ಟಲ್ಲ ಬೇಗನೆ ನಿಗದಿತ ಸ್ಥಳಕ್ಕೆ ತಲುಪಬಹುದು
-ಏರ್ಪೋರ್ಟ್ ಗೆ ವೋಲ್ವೋ ಬಸ್ ಗಳಿಂದ ಬೇಗನೆ ತಲುಪಬಹುದು
ಹೈಫೈ ಮಹಿಳೆಯರಿಗೆ ವೋಲ್ವೋ ಬಸ್ ಗಳು ಅಚ್ಚುಮೆಚ್ಚಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ