2018ರ ಚುನಾವಣೆಯಲ್ಲಿ 65 ಹಾಲಿ ಕಾಂಗ್ರೆಸ್ ಶಾಸಕರು ಸೋಲ್ತಾರಂತೆ...!

ಗುರುವಾರ, 25 ಮೇ 2017 (19:45 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 65 ಹಾಲಿ ಕಾಂಗ್ರೆಸ್ ಶಾಸಕರು ಸೋಲನುಭವಿಸ್ತಾರಂತೆ. ಇದು ವಿಪಕ್ಷಗಳು ಹೇಳುತ್ತಿರುವುದಲ್ಲ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಅಂತರಿಕ ಸಮೀಕ್ಷೆಯ ಫಲಿತಾಂಶ.
ಮುಂದಿನ ವಿಧಾನಸಭೆ ಚುನಾವಣೆಯ ರಣೋತ್ಸಾಹದಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಸಮೀಕ್ಷೆ ಶಾಕ್ ತಂದಿದೆ. ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ಸಿಗರಿಗೆ ಸಮೀಕ್ಷೆ ಆಘಾತ ತಂದಿದೆ.
 
ಕಾಂಗ್ರೆಸ್ ಪಕ್ಷದ 65 ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಸೋಲನುಭವಿಸಲಿದ್ದಾರೆ ಎನ್ನುವ ಅಂಶ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸೋಲನುಭವಿಸುವ ಹಾಲಿ ಶಾಸಕರ ಪಟ್ಟಿ ವೇಣುಗೋಪಾಲ್ ಕೈಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
 
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿ, ಕೂಡಲೇ 65 ಕ್ಷೇತ್ರಗಳಲ್ಲಿ ಪರ್ಯಾಯ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ. ಇಲ್ಲವಾದಲ್ಲಿ ಸೋಲನುಭವಿಸಲಿರುವ ಹಾಲಿ ಶಾಸಕರ ಗೆಲುವಿಗೆ ರಣತಂತ್ರ ರೂಪಿಸಿ ಎಂದು ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ