ಆಸ್ತಿ ವಿವಾದದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷನ ಮರ್ಡರ್
ಬೀದರ್-ಆಸ್ತಿ ವಿವಾದ ಹಿನ್ನೆಲೆ ಮಾಜಿ ಗ್ರಾ.ಪಂ. ಅಧ್ಯಕ್ಷನ ಮರ್ಡರ್ ಮಾಡಲಾಗಿದೆ..ಬೀದರ್ ತಾಲೂಕಿನ ನಿರ್ಣಾವಾಡಿ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಮಲ್ಲಿಕಾರ್ಜುನ ರಾಜಗೀರೆ ಗ್ರಾ.ಪಂ. ಮಾಜಿ ಅಧ್ಯಕ್ಷನ ಕೊಲೆಯಾಗಿದೆ..ನಿನ್ನೆ ನಡೆದ ಜಮೀನು ಸರ್ವೆ ವೇಳೆ ಗಲಾಟೆ ನಡೆದಿತ್ತು, ಗಲಾಟೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮಲ್ಲಿಕಾರ್ಜುನ್ ಕೊಲೆ ಮಾಡಲಾಗಿದೆ.
ಇನ್ನು ಗ್ರಾಮದ ಲಿಂಗರಾಜ ನಿಂಬೂರೆ, ಜಗದೀಶ್ ನಿಂಬೂರೆ, ವೀರಶೆಟ್ಟಿ ಸೇರಿದಂತೆ ಧನರಾಜ್ ನಿಂಬೂರೆ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ಪೊಲೀಸರು 6 ಆರೋಪಿಗಳ ಬಂಧನ, ಇನ್ನುಳಿದವರಿಗೆ ಶೋಧ ನಡೆಸುತ್ತಿದ್ದಾರೆ.. ಈ ಪ್ರಕರಣ ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.