ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳು, ನುಸಿ ಪತ್ತೆ

ಶನಿವಾರ, 14 ಜುಲೈ 2018 (19:20 IST)
ಶಾಲೆಯ ಮಕ್ಕಳ ಬಗ್ಗೆ ಅದೇಕೆ ನಿರ್ಲಕ್ಷ್ಯವೋ ಗೊತ್ತಿಲ್ಲ. ಸರಕಾರಿ ಶಾಲೆಯ ಮಧ್ಯಾಹ್ನದ ಊಟದ ಪಾಡಂತೂ ಆ ದೇವರಿಗೆ ಪ್ರೀತಿ… ಇಲ್ಲೊಂದು ಶಾಲೆಯ ಮಕ್ಕಳ ಊಟದಲ್ಲಿ ಹುಳು, ನುಸಿ ಪತ್ತೆಯಾಗಿವೆ.

ಕೊಪ್ಪಳ ಜಿಲ್ಲೆಯ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಯಾರಿಸಿದ ಬಿಸಿಯೂಟದಲ್ಲಿ ಹುಳಗಳು, ನುಸೀ ಪತ್ತೆಯಾಗಿವೆ.
ಶಾಲೆಯ ಬಿಸಿ ಯೂಟ ತಯಾರಕರು ಮತ್ತು ಶಾಲೆಯ ಮುಖ್ಯ ಗುರುಗಳ ನಿರ್ಲಕ್ಷದಿಂದ ಈ ಘಟನೆ ನಡೆದಿದೆ.   ಶಾಲೆಯಲ್ಲಿ ಸಭೆ ನಡೆಸಿ ಮುಖ್ಯ ಗುರುಗಳನ್ನು ಹಾಗೂ ಬಿಸಿಯೂಟ ತಯಾರಕನ್ನು ಗ್ರಾಮಸ್ಥರು ತರಾಟೆಗೆ  ತೆಗೆದುಕೊಂಡರು.
ಹಲವಾರು ದಿನಗಳಿಂದ ಶಾಲೆಯಲ್ಲಿ ತಯಾರಿಸುವ ಬಿಸಿಯೂಟದಲ್ಲಿ ಹುಳುನುಸಿ ಬರುತ್ತಿದ್ದರೂ ಸಹ  ಮೇಲಾಧಿಕಾರಿಗಳು ಗಮನಿಸದೇ ಇರುವುದು ಘಟನೆಗೆಕಾರಣ ಎನ್ನಲಾಗಿದೆಬೇವುರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ