ಒಂಬತ್ತನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಬುಧವಾರ, 21 ಜೂನ್ 2023 (13:47 IST)
ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರಿಂದ  9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನೆ ಮಾಡಲಾಗಿತ್ತು.ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಬಳಿಕ ಯೋಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ವಿವಿಧ ಭಂಗಿಗಳ ಯೋಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ,ಸಭಾಧ್ಯಕ್ಷ ಯುಟಿ ಖಾದರ್, ಶರವಣ,ವೆಂಕಟೇಶ್ ಪ್ರಸಾದ್ ,ಅಂಜು ಬಾಬಿ ಜಾರ್ಜ್, ನಟಿ ಭಾವನ ಉಪಸ್ಥಿತರಿದ್ದರು.
 
ಈ ವೇಳೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಚಿವ ದಿನೇಶ್ ಗುಂಡೂರಾವ್ 9ನೇ ಅಂತರಾಷ್ಟ್ರೀಯ ದಿನಾಚರಣೆ ಮಾಡುತ್ತಿದ್ದೇವೆ.ಯೋಗ ನಮ್ಮ ದೇಶ ಸಂಸ್ಕೃತಿ ಮತ್ತು ಪೂರ್ವಜರ ಕೊಡಿಗೆ.ಇದು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟು ಹೊಗಿದ್ದಾರೆ.ವಿಶ್ವಕ್ಕೆ ಯೋಗ ಕೊಡುಗೆಯನ್ನು ಕೊಟ್ಟಿದ್ದಾರೆ.ವಿಶ್ವದ ಎಲ್ಲಾ ಕಡೆ ಈ ದಿನಾಚರಣೆ ಮಾಡುತ್ತಾರೆ.ಯೋಗದಿಂದ ಸಾಕಷ್ಟು ಬದಲಾವಣೆ ಆಗುತ್ತೆ.ಉತ್ಸಹ, ಚುರುಕು ದೈಹಿಕ ಬದಲಾವಣೆಗೆ ಯೋಗ ಸಹಕಾರಿ ಆಗುತ್ತೆ.30 ವರ್ಷಗಳ ಹಿಂದೆ ಕಾಲರಾ ಮಲೇರಿಯಾ ದಂತ ಕಾಯಿಲೆಗಳು ಬರುತ್ತಿದ್ದವು.ಈಗ ಹೃದಯಾಘಾತ, ಮನಸಿ ಒತ್ತಡ ಹೆಚ್ಚಾಗುತ್ತಿದೆ.ಯೋಗದಿಂದ ಆರೋಗ್ಯದಲ್ಲಿ ಬದಲಾವಣೆ ಆಗುತ್ತೆ.ಯೋಗ ಅಭ್ಯಾಸಕ್ಕೆ ಸರ್ಕಾರ ಸಹಕಾರ ಕೊಡುತ್ತೆ.ಶಾಲೆಗಳಲ್ಲೂ ಯೋಗ ಆಚರಣೆ ಮಾಡಲು ಸರ್ಕಾರ ಸಹಕಾರ ಕೊಡುತ್ತೆ.ನಿಮ್ಮ ಬದುಕಿನ ಒಂದು ಭಾಗವಾಗಿ ಉಳಿದುಕೊಳ್ಳಲಿ ಎಂದು ಹೇಳುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ